ಕೆಲಸಕ್ಕಾಗಿ ವಿದೇಶಕ್ಕೆ ಹೋಗುವ ಮುನ್ನ ಆಲೋಚಿಸಿ; ವೇಟರ್​ ಜಾಬ್​ಗಾಗಿ ಸರತಿ ಸಾಲಿನಲ್ಲಿ ನಿಂತಿರುವ ಭಾರತೀಯರು | Waiter Job

Untitled-design-2024-10-06T154453.369
Published on

ಒಟ್ಟಾವಾ: ಉದ್ಯೋಗ ಅರಸಿ ವಿದೇಶಕ್ಕೆ ತೆರಗಳುವವರ ತಿಳಿದುಕೊಳ್ಳಬೇಕಾದ ವಿಚಾರ ಇದು. ಕೆನಡಾದ ರೆಸ್ಟೋರೆಂಟ್ ಹೊರಗೆ ಉದ್ಯೋಗಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವ ವಿಡಿಯೋವೊಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತದೆ. ಸಂದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವುದು ವಿಶೇಷವಲ್ಲ. ಆದರೆ ವೇಟರ್​​ ಉದ್ಯೋಗ(Waiter Job)ಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವವರಲ್ಲಿ ಅತಿ ಹೆಚ್ಚು ಭಾರತೀಯರೆ ಇರುವುದು ಕಳವಳದ ವಿಷಯವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗುತ್ತಿರುವ​​ ವಿಡಿಯೋದಲ್ಲಿ ಉದ್ಯೋಗವನ್ನು ಪಡೆಯಲು ಫೈಲ್​ಗಳನ್ನು ಹಿಡಿದು ಸರತಿ ಸಾಲಿನಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ. ಬ್ರಾಂಪ್ಟನ್‌ನಲ್ಲಿ ಹೊಸ ರೆಸ್ಟೋರೆಂಟ್‌ನ ಪ್ರಾರಂಭದ ನಂತರ ವೇಟರ್ ಉದ್ಯೋಗಗಳಿಗಾಗಿ 3000 ವಿದ್ಯಾರ್ಥಿಗಳು (ಹೆಚ್ಚಾಗಿ ಭಾರತೀಯರು) ಸಾಲಿನಲ್ಲಿ ನಿಂತಿರುವುದಾಗಿ ಹೇಳಲಾಗುತ್ತಿದೆ. ಆದರೆ ವಿಡಿಯೋ ಬಗೆಗಿನ ಸತ್ಯಾಸತ್ಯೆಗಳ ಕುರಿತು ಯಾವುದೇ ಮಾಹಿತಿ ಇಲ್ಲ.

ಸುಂದರವಾದ ಕನಸುಗಳೊಂದಿಗೆ ಭಾರತವನ್ನು ತೊರೆದು ಕೆನಡಾಕ್ಕೆ ಹೋಗುವ ವಿದ್ಯಾರ್ಥಿಗಳು ಗಂಭೀರ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬ ಶೀರ್ಷಿಕೆಯಡಿ ಪೋಸ್ಟ್​ ಮಾಡಲಾಗಿರುವ ಈ ವಿಡಿಯೋ ಕೆನಡಾದಲ್ಲಿ ಅಧ್ಯಯನ ಮಾಡುವ ಅಥವಾ ಕೆಲಸ ಮಾಡುವ ಬಗ್ಗೆ ಯೋಚಿಸುವ ಜನರಲ್ಲಿ ಬಹಳಷ್ಟು ಆತಂಕವನ್ನು ಸೃಷ್ಟಿಸಿದೆ.

ಸರತಿ ಸಾಲಿನಲ್ಲಿ ನಿಂತಿರುವ ವಿದ್ಯಾರ್ಥಿಗಳು ಹೇಳುವುದೇನು?:

ನಾನು ಮಧ್ಯಾಹ್ನ 12 ಗಂಟೆಗೆ ಇಲ್ಲಿಗೆ ಬಂದಿದ್ದೇನೆ. ಸರತಿ ಸಾಲು ನಿಜವಾಗಿಯೂ ಉದ್ದವಾಗಿತ್ತು. ನಾವು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಿದ್ದೇವೆ ಹಾಗೂ ಸಂದರ್ಶನ ನಡೆಸುವುದಾಗಿ ಹೇಳಿದ್ದಾರೆ. ಆದರೆ ಏನೂ ಆಗಲಿಲ್ಲ. ಜನ ಬರುತ್ತಲೇ ಇದ್ದಾರೆ, ಆದರೆ ಇಲ್ಲಿ ಉದ್ಯೋಗಗಳಿಗೆ ಯಾವುದೇ ಅವಕಾಶವಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ನಿಜವಾಗಿಯೂ ತುಂಬಾ ಕಷ್ಟ ಎಂದು ಸಾಲಿನಲ್ಲಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಆಗಮ್‌ವೀರ್ ಸಿಂಗ್ ನಿರಾಸೆ ವ್ಯಕ್ತಪಡಿಸಿದರು.

ಇದು ತುಂಬಾ ಕೆಟ್ಟದು, ಎಲ್ಲರೂ ಕೆಲಸ ಹುಡುಕುತ್ತಿರುವಂತೆ ತೋರುತ್ತಿದೆ. ಮತ್ತು ಯಾರಿಗೂ ಒಳ್ಳೆಯ ಕೆಲಸ ಸಿಗುತ್ತಿಲ್ಲ. ನನ್ನ ಅನೇಕ ಸ್ನೇಹಿತರಿಗೆ ಇದೀಗ ಕೆಲಸವಿಲ್ಲ ಹಾಗೂ ಅವರು 2-3 ವರ್ಷಗಳಿಂದ ಇಲ್ಲಿದ್ದಾರೆ. ಕೆನಡಾಕ್ಕೆ ಸ್ಥಳಾಂತರಗೊಂಡ ನಂತರ ಉದ್ಯೋಗವನ್ನು ಹುಡುಕಲು ಹೆಣಗಾಡುತ್ತಿರುವ ಇದೇ ರೀತಿಯ ಅನುಭವಗಳನ್ನು ಅನೇಕರು ಹಂಚಿಕೊಂಡಿದ್ದಾರೆ.

ವೈರಲ್​ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಬ್ರಾಂಪ್ಟನ್‌ನಲ್ಲಿ ವೇಟರ್ ಉದ್ಯೋಗಗಳಿಗಾಗಿ 3,000 ವಿದ್ಯಾರ್ಥಿಗಳು ಅದರಲ್ಲೂ ಅತಿ ಹೆಚ್ಚು ಭಾರತೀಯರು ಕಾಯುತ್ತಿರುವುದು ಆತಂಕಕಾರಿಯಾಗಿದೆ, ಇದು ಟ್ರುಡೊ ಕೆನಡಾದಲ್ಲಿ ನಿರುದ್ಯೋಗದ ಕಠೋರ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ, ಸಮಸ್ಯೆಯೆಂದರೆ ಅವರು ಅಲ್ಲಿ ಯಾವುದೇ ಕೆಲಸ ಮಾಡಲು ಸಿದ್ಧರಿದ್ದಾರೆ ಆದರೆ ಭಾರತದಲ್ಲಿ ಅದೇ ಕೆಲಸ ಮಾಡಲು ಸಂಕೋಚ ಪಡುತ್ತಾರೆ.
ಇದು ನಿಜವಾಗಿದ್ದರೆ, ಕೆನಡಾ ದೊಡ್ಡ ನಿರುದ್ಯೋಗವನ್ನು ಎದುರಿಸುತ್ತಿದೆ. ಭಾರತದಲ್ಲಿ ಹೊಸ ರೆಸ್ಟೋರೆಂಟ್‌ನಲ್ಲಿ ಉದ್ಯೋಗಕ್ಕಾಗಿ ಇಷ್ಟು ದೊಡ್ಡ ಸಂಖ್ಯೆಯ ಯುವಕರು ಸಾಲಿನಲ್ಲಿ ನಿಂತಿರುವುದನ್ನು ನಾನು ನೋಡಿಯೇ ಇಲ್ಲ, ಆರ್ಥಿಕ ಕುಸಿತದ ಜತೆಗೆ ವಿದೇಶಕ್ಕೆ ತೆರಳಲು ಇದು ಸರಿಯಾದ ಸಮಯವಲ್ಲ ಎಂದು ಜನರು ಅರ್ಥಮಾಡಿಕೊಳ್ಳಬೇಕು ಎಂದು ಕಾಮೆಂಟ್​ ಮಾಡುತ್ತಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net