ಇ-ಸ್ವತ್ತು ವಿತರಣಾ ಆಂದೋಲನ

E Khata
Published on

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ತನ್ನ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜ.28ರಿಂದ ೆ.27ರವರೆಗೆ ಇ-ಸ್ವತ್ತು ವಿತರಣಾ ಆಂದೋಲನ ಮಾಸಾಚಾರಣೆ ಏರ್ಪಡಿಸಿದೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕರವಸೂಲಿಗಾರರು ತೆರಿಗೆ ವಸೂಲಾತಿಯಲ್ಲಿ ಶೇ.58 ತೆರಿಗೆ ಸಂಗ್ರಹವಾಗಿದೆ. ಉಳಿದ ಭಾಗವೂ ಇ-ಸ್ವತ್ತು ಇಲ್ಲದ ಕಾರಣಕ್ಕೆ ಸಾಧ್ಯವಾಗಿಲ್ಲ ಎಂದು ವರದಿ ನೀಡಿದ್ದಾರೆ. ಆದರಿಂದ ತೆರಿಗೆ ವಸೂಲಾತಿ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವ ಸಂಬಂಧ ಮಾಸಾಚಾರಣೆ ಹಮ್ಮಿಕೊಳ್ಳಲಾಗಿದೆ. ಈ ಸಲುವಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ಮತ್ತು ದಾಖಲಾತಿಗಳೊಂದಿಗೆ ವರದಿಯನ್ನು ಜಿಪಂಗೆ ಸಲ್ಲಿಸುವಂತೆ ಬೆಂಗಳೂರು ನಗರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರಲ್ಲಿ ಇ-ಸ್ವತ್ತು ಅಂದೋಲನ ಕುರಿತು ಅರಿವು ಮೂಡಿಸುವುದು, ಮನೆ- ಮನೆಗೆ ಭೇಟಿ ನೀಡಿ ಪ್ರತಿ ಕುಟುಂಬಕ್ಕೆ ಕರಪತ್ರ ಹಂಚುವುದು, ಬೀದಿನಾಟಕ, ಗ್ರಾಮವಾರು ಸಭೆ ನಡೆಸಬೇಕೆಂದು ಗ್ರಾಪಂ ಅಧಿಕಾರಿ, ಸಿಬ್ಬಂದಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಸೂಚಿಸಿದ್ದಾರೆ.

ಇ-ಸ್ವತ್ತು ಪಡೆಯಲು ಅರ್ಹತೆ

ಗ್ರಾಮ ಠಾಣಾ ನಿವೇಶನ, ಕಟ್ಟಡಗಳು, 2023ರ ಜೂ.14ರ ಪೂರ್ವದಲ್ಲಿ ಭೂ ಪರಿವರ್ತನೆ ಆಗಿರುವ ನಿವೇಶನ ಮತ್ತು ಮನೆಗಳಿಗೆ, 94(ಸಿಸಿ) ಕಾಯ್ದೆಯಡಿ ನಿರ್ಮಿಸಿ ಕೊಂಡಿರುವ ಮನೆಗಳಿಗೆ ಹಾಗೂ ಆರ್‌ಟಿಸಿ ಹೊಂದಿರುವ ಕೃಷಿ ಭೂಮಿಯಲ್ಲಿ ಮನೆ ಕಟ್ಟಿಸಿರುವ ಕಂದಾಯ ಜಾಗಗಳಿಗೆ ಇ-ಸ್ವತ್ತು ಪಡೆಯಲು ಅರ್ಹತೆ ಹೊಂದಿರುತ್ತಾರೆ.

ಹಾಜರುಪಡಿಸಬೇಕಾದ ದಾಖಲೆಗಳು

ಶುದ್ಧ ಕ್ರಯ ಪತ್ರ, ಮೂಲ ಪತ್ರಗಳ ನಕಲು, ಇತ್ತೀಚಿನ ಆಸ್ತಿ ತೆರಿಗೆ ರಸೀದಿ, ಸೈಟ್/ಕಟ್ಟಡದ ೆಟೋ, ಕಟ್ಟಡಗಳಾಗಿದ್ದಲ್ಲಿ ಬೆಸ್ಕಾಂನಿಂದ ಪಡೆದ ಸೇವಾ ಪ್ರಮಾಣ ಪತ್ರ, ಸೈಟ್/ಕಟ್ಟಡ ಮಾಲೀಕರ ಭಾವಚಿತ್ರ, ಗುರುತಿನ ಚೀಟಿ, ದಾಖಲೆಗಳ ದೃಢೀಕರಣವನ್ನು ೋಷಿಸುವ ಅಫಿಡವಿಟ್ ಮತ್ತು ಕೋರ್ಟ್ ಕ್ಲಿಯರೆನ್ಸ್ ಅಥವಾ ಅಫಿಡವಿಟ್(ಅನ್ವಯಿಸಿದರೆ) ಸಲ್ಲಿಸುವುದು ಕಡ್ಡಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net