ಬಳ್ಳಾರಿಯಲ್ಲಿ ಸೆ.23ರಿಂದ ‘ಈ ಹೊತ್ತಿಗೆ’ ಕಥಾ ಕಮ್ಮಟ

E
Published on

ಬೆಂಗಳೂರು: ‘ಈ ಹೊತ್ತಿಗೆ’ ಓದುಗರ ವೇದಿಕೆ ತನ್ನ ದಶಮಾನೋತ್ಸವ ಅಂಗವಾಗಿ ಬಳ್ಳಾರಿಯ ಅರಿವು ಸಂಸ್ಥೆ ಮತ್ತು ಮರ್ಚೆಡ್ ಟ್ರಸ್ಟ್ ಸಹಯೋಗದಲ್ಲಿ ಸೆ. 23 ಮತ್ತು 24ರಂದು ಕಥಾ ಕಮ್ಮಟ ಆಯೋಜಿಸಿದೆ.

ಬಳ್ಳಾರಿಯ ಗುಗ್ಗರಹಟ್ಟಿಯ ಜ್ಞಾನಾಮೃತ ಪದವಿಪೂರ್ವ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಮ್ಮಟದಲ್ಲಿ ವಿವಿಧ ಜಿಲ್ಲೆಗಳ 37 ಕಥೆಗಾರರು ಹಾಗೂ ಕಥಾಸಕ್ತರು, 7 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ವಿಮರ್ಶಕಿ ಡಾ.ಎಂ.ಎಸ್. ಆಶಾದೇವಿ ಕಮ್ಮಟದ ನಿರ್ದೇಶಕರಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಎಸ್. ದಿವಾಕರ್, ಡಾ. ಅಮರೇಶ್ ನುಗಡೋಣಿ, ಜಯಶ್ರೀ ಕಾಸರವಳ್ಳಿ, ಪದ್ಮನಾಭ ಭಟ್, ಅನುಪಮಾ ಪ್ರಸಾದ್ ಭಾಗವಹಿಸಲಿದ್ದಾರೆ. ಸೆ. 23ರಂದು ಬೆಳಗ್ಗೆ 9.30ಕ್ಕೆ ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ. ಚೆನ್ನಬಸವಣ್ಣ ಕಮ್ಮಟ ಉದ್ಘಾಟಿಸಲಿದ್ದಾರೆ. ‘ಈ ಹೊತ್ತಿಗೆ’ ಸಂಸ್ಥೆಯ ಸ್ಥಾಪಕಿ ಜಯಲಕ್ಷ್ಮೀ ಪಾಟೀಲ್, ಅರಿವು ಸಂಸ್ಥೆಯ ಕಾರ್ಯದರ್ಶಿ ಡಾ. ಅರವಿಂದ ಪಟೇಲ್, ಮರ್ಚೆಡ್ ಟ್ರಸ್ಟ್‌ನ ಅಧ್ಯಕ್ಷ ಎಂ.ಜಿ. ಗೌಡ ಭಾಗವಹಿಸಲಿದ್ದಾರೆ. ಸೆ. 24ರಂದು ಸಂಜೆ ಸಮಾರೋಪ ಸಮಾರಂಭದಲ್ಲಿ ಎಸ್. ದಿವಾಕರ್, ಕವಿ ಆರಿಫ್ ರಾಜ ಇತರರು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net