ಪಿಯು ಪರೀಕ್ಷೆ ಬರೆದ ನಕಲಿಗಳು; ಪ್ರಕರಣ ದಾಖಲು

Student 17 March 20
Published on

ಗಂಗಾವತಿ: ನೋಂದಾಯಿತ ಅಭ್ಯರ್ಥಿಗಳ ಪರ ದ್ವಿತೀಯ ಪಿಯು ಪರೀಕ್ಷೆ ಬರೆಯುತ್ತಿದ್ದ ನಕಲಿ ವಿದ್ಯಾರ್ಥಿಗಳನ್ನು ಕೊಠಡಿ ಮೇಲ್ವಿಚಾರಕರು ಪತ್ತೆಹಚ್ಚಿದ್ದು, 6 ವಿದ್ಯಾರ್ಥಿಗಳ ವಿರುದ್ಧ ನಗರ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಅಮರೇಶ, ಕನಕಪ್ಪ, ರಮೇಶ ನೋಂದಾಯಿಸಿದ ವಿದ್ಯಾರ್ಥಿಗಳು. ರವಿ, ದೇವರಾಜ ಮತ್ತು ಮಹೇಶಕೃಷ್ಣ ಅವರ ಬದಲು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು. ಈ ಆರೂ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ನಗರದ ಎಚ್.ಆರ್.ಸರೋಜಮ್ಮ ಪ.ಪೂ.ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಎಕನಾಮಿಕ್ಸ್ ಪರೀಕ್ಷೆ ಮಂಗಳವಾರ ನಡೆಯುತ್ತಿತ್ತು. ರವಿ, ದೇವರಾಜ ಮತ್ತು ಮಹೇಶಕೃಷ್ಣ ಪರೀಕ್ಷೆ ಬರೆಯುತ್ತಿದ್ದಾಗ ಕೊಠಡಿ ಮೇಲ್ವಿಚಾರಕರಿಗೆ ಸಂಶಯ ಮೂಡಿದೆ. ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಹಿರಂಗವಾಗಿದೆ. ನಕಲಿ ವಿದ್ಯಾರ್ಥಿಗಳ ಜತೆ ಅಸಲಿ ವಿದ್ಯಾರ್ಥಿ ಅಮರೇಶನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ಈ ಪರೀಕ್ಷೆ ಬರೆಯಲು 2000 ರೂ. ನೀಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net