More

    ಚರ್ಚ್​ನಲ್ಲೇ ಹಬ್ಬಿತು ಕರೊನಾ! ಪಾದ್ರಿ ಮಾಡಿದ ಕೆಲಸದಿಂದಾಗಿ 46 ಜನರು ಕರೊನಾಕ್ಕೆ ತುತ್ತು

    ಸಿಯೊಂಗ್ನಮ್: ಚೀನಾದ ಕರೊನಾ ವೈರಸ್​ ಪ್ರಪಂಚದಲ್ಲೆಲೆಡೆ ಹರಡಿಕೊಂಡಿದೆ. ಔಷಧವಿಲ್ಲದ ಕಾಯಿಲೆ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಎಂದು ಎಲ್ಲೆಡೆ ಮಾಹಿತಿ ನೀಡಲಾಗುತ್ತಿದೆಯಾದರೂ ಕೆಲ ಪ್ರದೇಶಗಳಲ್ಲಿ ಜನರು ಕರೊನಾದಿಂದ ದೂರಾಗಲು ವಿಚಿತ್ರವೆನಿಸುವಂತಹ ಕೆಲಸಗಳನ್ನು ಮಾಡಲಾರಂಭಿಸಿದ್ದಾರೆ. ಇಂತದ್ದೇ ಒಂದು ವಿಚಿತ್ರ ಕೆಲಸದಿಂದ 46 ಜನರು ಕರೊನಾಕ್ಕೆ ತುತ್ತಾಗಿರುವ ಘಟನೆ ದಕ್ಷಿಣ ಕೋರಿಯಾದ ಸಿಯೋಗ್ನಮ್​ನಲ್ಲಿ ನಡೆದಿದೆ.

    ದಕ್ಷಿಣ ಕೋರಿಯಾದಲ್ಲಿ ಕರೊನಾ ವೈರಸ್​ನ ಭೀತಿ ಹೆಚ್ಚಾದ ಹಿನ್ನೆಲೆ ಸಿಯೊಂಗ್ನಮ್​ನಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಬ್ರೇಕ್​ ಹಾಕಲಾಗಿದೆ. ಚರ್ಚ್​ಗಳನ್ನು ತೆರೆಯುವಂತಿಲ್ಲ ಎಂದು ಆದೇಶಿಸಲಾಗಿದೆ. ಆದರೆ ಕೆಲ ಚರ್ಚ್​ಗಳು ಭಾನುವಾರದ ಪ್ರಾರ್ಥನೆಗೋಸ್ಕರ ಚರ್ಚ್​ಗಳನ್ನು ತೆಗೆಯುತ್ತಿದ್ದು ಅಲ್ಲಿ ನಡೆಸಲಾಗಿರುವ ಕೆಲಸವೊಂದರಿಂದಾಗಿ 46 ಜನರಲ್ಲಿ ಕರೊನಾ ಕಾಣಿಸಿಕೊಂಡಿದೆ.

    ನಗರದ ರಿವರ್​ ಆಫ್​ ಗ್ರೇಸ್​ ಕಮ್ಯುನಿಟಿ ಚರ್ಚ್​ನಲ್ಲಿ ಮಾರ್ಚ್​ 8ರಂದು ಪ್ರಾರ್ಥನೆ ನಡೆಸಲಾಗಿತ್ತು. ಅಲ್ಲಿ ಕರೊನಾ ತಡೆಗಟ್ಟುವ ಸಲುವಾಗಿ ರೋಗನಿರೋಧಕವೆಂದು ಉಪ್ಪು ನೀರನ್ನು ಸ್ಪ್ರೇ ಬಾಟೆಲ್​ ಒಂದರಲ್ಲಿ ಹಾಕಿ ಅಲ್ಲಿದ್ದವರ ಬಾಯಿಯಲ್ಲಿ ಸಿಂಪಡಿಸಲಾಗಿತ್ತು. ಪ್ರತಿಯೊಬ್ಬರ ಬಾಯಿಯಲ್ಲಿ ಸಿಂಪಡಿಸುವಾಗ ಸ್ಪ್ರೇ ಬಾಟೆಲ್​ನ್ನು ಸ್ವಚ್ಛಗೊಳಿಸದೇ ಬಳಸಿದ ಕಾರಣ ಅಲ್ಲಿ ಕರೊನಾ ವೈರಸ್​ ಹರಡಿಕೊಂಡಿದೆ. ಚರ್ಚ್​ಗೆ ಬಂದಿದ್ದವರಲ್ಲಿ ಒಬ್ಬರಲ್ಲಿದ್ದ ಕರೊನಾ ಬರೋಬ್ಬರಿ 46 ಜನಕ್ಕೆ ಹರಡಿಕೊಂಡಿದೆ.

    ಮೊದಲಿಗೆ ಚರ್ಚ್​ನ ಪಾದ್ರಿ, ಮತ್ತವನ ಪತ್ನಿ ಸೇರಿದಂತೆ ಒಟ್ಟು ಆರು ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಚರ್ಚ್​ಗೆ ಅಂದು ತೆರಳಿದ್ದವರಲ್ಲಿ 46 ಜನರಲ್ಲಿ ಸೋಂಕಿರುವುದು ಧೃಡವಾಗಿದೆ. ಇನ್ನೂ ಅನೇಕರನ್ನು ತಪಾಸಣೆಯಲ್ಲಿಡಲಾಗಿದೆ.

    ಈ ವಿಚಾರವಾಗಿ ಚರ್ಚ್​ನ ಪಾದ್ರಿ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ. ಇದಕ್ಕೆ ತಾನೇ ಹೊಣೆ ಎಂದು ಒಪ್ಪಿಕೊಂಡಿರುವ ಪಾದ್ರಿ ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ. ದಕ್ಷಿಣ ಕೋರಿಯಾದಲ್ಲಿ ಈ ರೀತಿಯಲ್ಲಿ ಒಂದೇ ಸ್ಥಳದಲ್ಲಿ ಹತ್ತಾರು ಜನರಿಗೆ ಕರೊನಾ ಕಾಣಿಸಿಕೊಳ್ಳುತ್ತಿರುವುದು ಇದು ಎರಡನೇ ಪ್ರಕರಣ. ಕಾಲ್​ ಸೆಂಟರ್​ ಒಂದರಲ್ಲಿ 129 ಜನರಿಗೆ ಸೋಂಕಿರುವುದು ಧೃಡವಾಗಿತ್ತು. ದೇಶದಲ್ಲಿ ಒಟ್ಟು 8236 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. (ಏಜೆನ್ಸೀಸ್​)

    ಪ್ರತ್ಯೇಕ ಕೊಠಡಿಗಳಲ್ಲಿರುವ ಕರೊನಾ ಸೋಂಕಿತರಿಗೆ ಕೇರಂ ಬೋರ್ಡ್​, ಟಿವಿ, ಇಂಟರ್​ನೆಟ್​ ಸೌಲಭ್ಯ

    ಕುಡುಕ ಪುತ್ರನ ಕಾಮದಾಟಕ್ಕೆ ಅಮ್ಮ ಕಂಗಾಲು: ಶಾಕ್​ಗೆ ಒಳಗಾದ ಅಪ್ಪ ಮೊರೆ ಹೋದದ್ದು ಪೊಲೀಸರಿಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts