More

    ಪ್ರತ್ಯೇಕ ಕೊಠಡಿಗಳಲ್ಲಿರುವ ಕರೊನಾ ಸೋಂಕಿತರಿಗೆ ಕೇರಂ ಬೋರ್ಡ್​, ಟಿವಿ, ಇಂಟರ್​ನೆಟ್​ ಸೌಲಭ್ಯ

    ಮುಂಬೈ: ದೇಶದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕಿತರು ಕಾಣಿಸಿಕೊಂಡಿದ್ದು, ರಾಜ್ಯದ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕರೊನಾ ಸೋಂಕಿತರಿಗೆ ಕೆಲ ವಿಶೇಷ ಸೌಲಭ್ಯಗಳನ್ನು ನೀಡುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ತಿಳಿಸಿದ್ದಾರೆ.

    ಆಸ್ಪತ್ರೆಗಳ ಪ್ರತ್ಯೇಕ ಕೋಣೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಕೇರಂ ಬೋರ್ಡ್​ ನೀಡಲಾಗುವುದು. ಇದರ ಜತೆಯಲ್ಲಿ ಇಂಟರ್​ನೆಟ್​ ಒದಗಿಸಿಕೊಟ್ಟು ಟಿವಿಯನ್ನೂ ಸಹ ಹಾಕಿಕೊಡಲಾಗುವುದು ಎಂದು ಉದ್ಧವ್​ ಠಾಕ್ರೆ ತಿಳಿಸಿದ್ದಾರೆ. ಜನರು ಯಾವುದೇ ಕಾರಣಕ್ಕೂ ವೈರಸ್​ ಬಗ್ಗೆ ಭಯ ಪಡುವುದು ಬೇಡ. ಅಗತ್ಯ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ವೈರಸ್​ನ್ನು ತಡೆಗಟ್ಟಬೇಕು ಎಂದು ಅವರು ತಿಳಿಸಿದ್ದಾರೆ.

    ಮೂರು ವರ್ಷದ ಮಗು ಸೇರಿದಂತೆ ರಾಜ್ಯದಲ್ಲಿ ಒಟ್ಟು 39 ಜನರಲ್ಲಿ ಕರೊನಾ ಇರುವುದು ಪತ್ತೆಯಾಗಿದೆ. ನಿನ್ನೆ (ಮಾ.16) ಆಸ್ಪತ್ರೆಯೊಂದರಿಂದ 11 ಜನ ಕರೊನಾ ಶಂಕಿತರು ಓಡಿಹೋಗಿದ್ದರು. ಆದರೆ ಅವರ ಮನೆಗಳಲ್ಲಿ ಅವರನ್ನು ಒಳಗೆ ಸೇರಿಸಿಕೊಳ್ಳದ ಕಾರಣ ಅವರು ತಪಾಸಣೆ ಮಾಡಿಸಿಕೊಳ್ಳುವುದಕ್ಕೆ ಮರಳಿದ್ದರು. (ಏಜೆನ್ಸೀಸ್​)

    ಕುರೂಪಿ, ಅಂಗವಿಕಲರಿಗಿಲ್ಲ ಟಿಕ್​ಟಾಕ್​ನಲ್ಲಿ ಅವಕಾಶ; ಸುಂದರವಿಲ್ಲದವರ ಅಕೌಂಟ್​ ಡಿಲೀಟ್​?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts