ಅಭಿಮಾನಿಯ ರಕ್ತದಲ್ಲೇ ಮೂಡಿಬಂತು ನಟ ದುನಿಯಾ ವಿಜಯ್ ಚಿತ್ರ!

Duniya vijay
Published on

ದಾವಣಗೆರೆ: ಸಿನಿಮಾ ನಟ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ವಿಶೇಷವಾಗಿ ಸಂಭ್ರಮಿಸುವುದು, ಆ ಸಂಭ್ರಮದ ಮೂಲಕವೇ ಗಮನ ಸೆಳೆಯಲ್ಪಡುವುದು ಹೊಸದೇನಲ್ಲ. ಅಂಥದ್ದೇ ಒಂದು ವಿಶೇಷ ನಟ ದುನಿಯಾ ವಿಜಯ್ ಜನ್ಮದಿನಾಚರಣೆಯಲ್ಲೂ ನಡೆದಿದೆ.

ಇಂದು ನಟ-ನಿರ್ದೇಶಕ ದುನಿಯಾ ವಿಜಯ್ ಅವರ ಜನ್ಮದಿನ. ವಿಶೇಷವೆಂದರೆ ಈ ದಿನವೇ ಅವರ ಚಿತ್ರವೊಂದು ಅಭಿಮಾನಿಯ ರಕ್ತದಲ್ಲೇ ಮೂಡಿಬಂದಿದೆ. ಅರ್ಥಾತ್, ಅವರ ಕಟ್ಟರ್ ಅಭಿಮಾನಿಯೊಬ್ಬ ತನ್ನ ರಕ್ತದಲ್ಲಿ ವಿಜಯ್ ಅವರ ಚಿತ್ರವನ್ನು ರಚಿಸಿದ್ದಾನೆ.

ದಾವಣಗೆರೆ ಜಿಲ್ಲೆಯ ಹರಿಹರದ ಮೋಹನ್ ಬಾಬು ಎಂಬ ಅಭಿಮಾನಿ ವಿಜಯ್​ಗೆ ಈ ರೀತಿಯಲ್ಲಿ ಜನ್ಮದಿನದ ಶುಭಾಶಯವನ್ನು ಕೋರಿದ್ದಾನೆ. ಸಿರಿಂಜ್​ ಮೂಲಕ ತನ್ನ ದೇಹದಿಂದ ರಕ್ತ ತೆಗೆದ ಈತ ಅದರಲ್ಲೇ ದುನಿಯಾ ವಿಜಯ್ ಚಿತ್ರ ರಚಿಸಿದ್ದಾನೆ. ಮೋಹನ್ ಬಾಬು ಡಿಪ್ಲೊಮಾ ಪದವೀಧರನಾಗಿದ್ದು ಹರಿಹರದಲ್ಲಿ ಟ್ಯಾಟೂ ಹಾಕುವ ವೃತ್ತಿ ಮಾಡುತ್ತಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net