ಜ.4ಕ್ಕೆ ‘ಕಾಯುವ ಕಾಯಕ’ ನಾಟಕ ಪ್ರದರ್ಶನ

Drama Show
Published on

ಬೆಂಗಳೂರು: ಹೊಸ ಹೊಸ ಪ್ರಯೋಗಗಳ ಮೂಲಕ ರಂಗಾಸಕ್ತರ ಗಮನ ಸೆಳೆದಿರುವ ನಗರದ ‘ಅಂತರಂಗ’ ತಂಡವು 2024 ರ ಮೊದಲ ಪ್ರದರ್ಶನವಾಗಿ ಜ.4ರ ಸಂಜೆ 7ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಡುಂಡಿರಾಜ್ ಅವರ ‘ಕಾಯುವ ಕಾಯಕ’ ನಾಟಕವನ್ನು ಆಯೋಜಿಸಿದೆ.

ಕಲಾಕ್ಷೇತ್ರ -60, ನಾಟಕ ಬೆಂಗಳೂರು 24ರ ಸಂಭ್ರಮಕ್ಕೆ ಅಂತರಂಗವು ಈ ಹೊಚ್ಚ ಹೊಸ ನಾಟಕ ಹಮ್ಮಿಕೊಂಡಿದೆ. ಯಾಂತ್ರಿಕ ಬದುಕಿನ ನವಿರಾದ ವೈರುಧ್ಯಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿರುವ ಡುಂಡಿರಾಜ್ ಅವರು ನಾಟಕದಲ್ಲಿ, ಕಾಯುವಿಕೆ ಎಂಬ ಪರಿಕಲ್ಪನೆಯಲ್ಲಿ ನಿರೀಕ್ಷೆ, ತೊಳಲಾಟ, ಹುಡುಕಾಟ, ಸಂಕೀರ್ಣತೆ, ಸಂಬಂಧಗಳ ಸಂಧಿಗ್ಧತೆ, ಅಸಹಾಯಕತೆಯನ್ನು ಚಿತ್ರಿಸಿದ್ದಾರೆ.

ಅರ್ಚನ ಶ್ಯಾಮ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಾಟಕದ ಟಿಕೆಟ್‌ಗಳನ್ನು ಬುಕ್ ಮೈ ಶೋ ನಲ್ಲಿ ಬುಕ್ ಮಾಡಬಹುದು ಎಂದು ಅಂತರಂಗ ತಂಡದ ಕಾರ್ಯದರ್ಶಿ ಅಂಕಲ್ ಶ್ಯಾಮ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net