ಪೀಕ್​ ಅವರ್​ನಲ್ಲೇ ಕೈಕೊಟ್ಟ ಮೆಟ್ರೋ: ನೇರಳೆ ಮಾರ್ಗದ ಸಂಚಾರದಲ್ಲಿ ವ್ಯತ್ಯಯ, ಪ್ರಯಾಣಿಕರ ಪರದಾಟ

Trains Delay
Published on

ಬೆಂಗಳೂರು: ಜನರು ತಮ್ಮ ತಮ್ಮ ಕೆಲಸಗಳಿಗೆ ತೆರಳುವ ಪೀಕ್​ ಅವರ್​ನಲ್ಲೇ ನಮ್ಮ ಮೆಟ್ರೋ ರೈಲು ಕೈ ಕೊಟ್ಟಿದೆ. ತಾಂತ್ರಿಕ ಕಾರಣದಿಂದ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿ ಕಡೆಗೆ ಸಾಗುವ ಮೆಟ್ರೋ ಸಂಚಾರ ಕೆಲ ಸಮಯದಿಂದ ತಾಂತ್ರಿಕ ಕಾರಣದಿಂದಾಗಿ ಸ್ಥಗಿತಗೊಂಡಿದೆ. ಜನರು ಕೆಸಲಕ್ಕೆ ತೆರಳುವ ಸಮಯದಲ್ಲೇ ಮೆಟ್ರೋ ಕೆಟ್ಟು ನಿಂತಿದ್ದು, ಟ್ರೈನ್​ ಬಾರದೇ, ಸರಿಯಾದ ಸಮಯಕ್ಕೆ ಕಚೇರಿಗೆ ತಲುಪಲು ಸಾಧ್ಯವಾಗದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಆಫೀಸ್​ಗೆ ಹೊರಟವರೆಲ್ಲ ನಿಲ್ದಾಣದಲ್ಲೇ ಮೆಟ್ರೋಗಾಗಿ ಕಾಯೋ ಪರಿಸ್ಥಿತಿ ಎದುರಾಗಿದೆ. ಬೆಳಗ್ಗೆ 8.50ರಿಂದ ಮೆಟ್ರೋ ಕೈಕೊಟ್ಟಿದೆ.

ಸದ್ಯ ಬಂದಿರುವ ಮಾಹಿತಿ ಪ್ರಕಾರ ತಾಂತ್ರಿಕ ದೋಷವನ್ನು ನಿವಾರಿಸುವ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲೇ ಮೆಟ್ರೋ ಸಂಚಾರ ಮತ್ತೆ ಆರಂಭವಾಗಲಿದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net