ದುಬೈ-ಅಮೃತಸರ ಏರ್ ಇಂಡಿಯಾ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

Untitled design - 2023-10-15T195123.516
Published on

ನವದೆಹಲಿ: ದುಬೈನಿಂದ ಅಮೃತಸರಕ್ಕೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಪ್ರಯಾಣಿಕರೊಬ್ಬರಿಗೆ ತಕ್ಷಣ ವೈದ್ಯಕೀಯ ಸಹಾಯ ಅಗತ್ಯವಿದ್ದ ಕಾರಣ ಲ್ಯಾಡಿಂಗ್ ಮಾಡಲಾಯಿತು ಎಂದು ಇಲಾಖೆ ತಿಳಿಸಿದೆ.

ಏರ್‌ಲೈನ್‌ನ ವಕ್ತಾರರ ಪ್ರಕಾರ, ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡುವ ಮೂಲಕ ಪ್ರಯಾಣಿಕರಿಗೆ ತಕ್ಷಣದ ವೈದ್ಯಕೀಯ ಸೇವೆಗಳನ್ನು ಒದಗಿಸಲಾಯಿತು. ಪ್ರಯಾಣಿಕರಿಗೆ ಚಿಕಿತ್ಸೆ ನೀಡಿದ ಬಳಿಕ ಹಾರಾಟಕ್ಕೆ ಅನುಮತಿ ದೊರಕಿತು. ತದನಂತರದಲ್ಲಿ ವಿಮಾನವು ಕರಾಚಿಯಿಂದ ಅಮೃತಸರಕ್ಕೆ ಮಧ್ಯಾಹ್ನ 2:30ಕ್ಕೆ ಹೊರಟಿತು ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು, "ದುಬೈ-ಅಮೃತಸರ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಹಠಾತ್ ವೈದ್ಯಕೀಯ ತೊಡಕುಗಳನ್ನು ಹೊಂದಿದ್ದರು (ಅಕ್ಟೋಬರ್ 14) ಮತ್ತು ಸಿಬ್ಬಂದಿ ಕರಾಚಿಗೆ ಸ್ಥಳಾಂತರಿಸಲು ಕೂಡಲೇ ನಿರ್ಧರಿಸಿದರು" ಎಂದು ಹೇಳಿದರು.

"ತಕ್ಷಣದ ವೈದ್ಯಕೀಯ ನೆರವು ನೀಡಲು ಕರಾಚಿ ಹತ್ತಿರದ ಸ್ಥಳವಾದ ಕಾರಣ ವಿಮಾನವು ದುಬೈನಿಂದ ಸ್ಥಳೀಯ ಸಮಯ 08.51ಕ್ಕೆ ಹೊರಟು, ಮಧ್ಯಾಹ್ನ 12.30ಕ್ಕೆ ಕರಾಚಿಯಲ್ಲಿ ಲ್ಯಾಡಿಂಗ್ ಆಯಿತು" ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net