More

    ಪಾಕ್​ ಆಟಗಾರರ ಎದುರು “ಜೈಶ್ರೀರಾಮ್” ಘೋಷಣೆ; ರಾಜಕೀಯ ತಿರುವು ಪಡೆದ ವಿವಾದ

    ನವದೆಹಲಿ: ಅಹಮದಬಾದಿನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಪಾಕ್​ ಆಟಗಾರ ಮೊಹಮ್ಮದ್​ ರಿಜ್ವಾನ್​ ಡ್ರೆಸ್ಸಿಂಗ್​ ರೂಮಿನತ್ತ ತೆರಳುವ ವೇಳೆ ಅಭಿಮಾನಿಗಳು ಜೈ ಶ್ರೀರಾಮ್​ ಎಂದು ಘೋಷಣೆ ಕೂಗಿದ್ದರು. ಪ್ರಸ್ತುತ ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

    ಇದಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿದ್ದ ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಪಾಕಿಸ್ತಾನದ ಆಟಗಾರರ ಎದುರು ಜೈ ಶ್ರೀರಾಮ್​ ಎಂದು ಘೋಷಣೆ ಕೂಗಿರುವುದನ್ನು ನಾನು ಖಂಡಿಸುತ್ತೇನೆ ಕ್ರಿಕೆಟ್​ ಅಭಿಮಾನಿಗಳ ಈ ವರ್ತನೆ ಸ್ವೀಕಾರ್ಹವಲ್ಲ ನಾನು ಇದನ್ನು ಖಂಡಿಸುತ್ತೇನೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಲಪಂಥೀಯ ಸಂಘಟನೆಗಳ ನಾಯಕರು ಉದಯನಿಧಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಉದಯನಿಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ, ಭಾರತ ದೇಶ ಪಾಕಿಸ್ತಾನ ತಂಡಕ್ಕೆ ಪ್ರತಿ ಭಾರಿ ಗೌರವ ನೀಡಿದೆ. ಇದರಲ್ಲಿ ಕಿಂಚಿತ್ತು ಕಡಿಮೆಯಾಗಿಲ್ಲ. ಕ್ರೀಡೆಯನ್ನು ಕ್ರೀಡೆಯಾಗಿ ನೋಡಿ ಎಂದು ನೀವು ಹೇಳಿದ್ದೀರಿ. ಹಾಗಯೇ ಧರ್ಮವನ್ನು ಧರ್ಮವಾಗಿ ನೋಡಿ. ಮತ್ಯಾಕೆ ಸನಾತನ ಧರ್ಮವನ್ನು ನಾಶ ಮಾಡಲು ಹೊರಟಿದ್ದೀರಿ. ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 13 ರನ್‌ಗಳಿಂದ ಗೆದ್ದಾಗ ಭಾರತೀಯ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು.

    ಇದನ್ನೂ ಓದಿ: ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪ; 3.1ರಷ್ಟು ತೀವ್ರತೆ ದಾಖಲು

    ಹೈದರಾಬಾದ್, ಅಹಮದಬಾದ್‌ನಲ್ಲೂ ಪಾಕಿಸ್ತಾನ ತಂಡಕ್ಕೆ ಅದ್ಧೂರಿ ಸ್ವಾಗತ ಕೋರಲಾಗಿದೆ.ಎಲ್ಲಾ ರೀತಿಯ ಗೌರವ ನೀಡಲಾಗಿದೆ. ಇನ್ನು ಪಾಕಿಸ್ತಾನ ಆಟಗಾರರ ಪಾಸ್ ಆಗುವ ವೇಳೆ ಜೈಶ್ರೀರಾಂ ಘೋಷಣೆ ಕೂಗಿದ್ದಾರೆ. ಇದರಲ್ಲಿ ಅಗೌರವ ತೋರಿದ ಮಾತೆಲ್ಲಿ. ಅಭಿಮಾನಿಗಳು ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ಉದಯನಿಧಿ ಸ್ಟಾಲಿನ್​ ಅವರು ಇದರಲ್ಲಿ ರಾಜಕೀಯ ಹುಡುಕುವ ಸಣ್ಣಮಟ್ಟಕ್ಕೆ ಇಳಿಯದೇ ಇರುವುದು ಒಳಿತು ಎಂದು ಅಣ್ಣಾಮಲೈ ತಿರುಗೇಟು ನೀಡಿದ್ದಾರೆ.

    ಇತ್ತ ಉದಯನಿಧಿ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಕಿಡಿಕಾರಿದ್ದು, ಪಾಕಿಸ್ತಾನದ ಆಟಗಾರರು ಮೈದಾನದಲ್ಲಿ ನಮಾಜ್​ ಮಾಡಿದರೆ ಏನು ಹೇಳದ ನೀವುಗಳು, ಬದಲಿಗೆ ಜೈಶ್ರೀರಾಮ್​ ಎಂದು ಘೋಷಣೆ ಕೂಗಿದರೆ ಯಾಕೆ ಆಕ್ಷೇಪ ವ್ಯಕ್ತಪಡಿಸುತ್ತೀರಾ. 2017ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫಿನಾಲೆಯಲ್ಲಿ ಪಾಕಿಸ್ತಾನ ತಂಡದವರು ಭಾರತದ ಆಟಗಾರರ ಜೊತೆ ಕೆಟ್ಟದಾಗಿ ವರ್ತಿಸಿದ್ದರು ಅದಕ್ಕೆ ಈಗ ತಿರುಗೇಟು ಕೊಟ್ಟಿದ್ದೇವೆ ಅದರಲ್ಲಿ ತಪ್ಪೇನಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts