More

    ಸಿನಿಮೀಯ ಶೈಲಿಯಲ್ಲಿ ಚಿನ್ನಾಭರಣ ಕಳ್ಳಸಾಗಣೆ; ಪ್ಯಾನ್​ ಇಂಡಿಯಾ ಕಾರ್ಯಾಚರಣೆಯಲ್ಲಿ 11 ಮಂದಿ ಅರೆಸ್ಟ್

    ಮುಂಬೈ: ಸಿನಿಮೀಯ ಶೈಲಿಯಲ್ಲಿ ಚಿನ್ನಾಭರಣಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಗ್ಯಾಂಗಗ ಒಂದನ್ನು ಬಂಧಿಸುವಲ್ಲಿ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 19 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

    ಪ್ರಕರಣ ಸಂಬಂಧ 11 ಮಂದಿಯನ್ನು DRI ಅಧಿಕಾರಿಗಳು ಬಂಧಿಸಿದ್ದು, ಇನ್ನಷ್ಟು ಜನರ ಬಂಧನವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಗ್ಯಾಂಗ್​ ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದರು.

    ಈ ಕುರಿತು ಪ್ರತಿಕ್ರಿಯಿಸಿರುವ DRIನ ಹಿರಿಯ ಅಧಿಕಾರಿಯೊಬ್ಬರು, ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿತ್ತು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇವರು ಚಿನ್ನ ಕಳ್ಳಸಾಗಾಣೆಗೆಂದೇ ಸಿಂಡಿಕೇಟ್​ ಒಂದನ್ನು ರಚಿಸಿಕೊಂಡಿದ್ದರು ಮತ್ತು ಅದರ ಮೂಲಕ ಕಾರ್ಯನಿರ್ವಹಿಸುತ್ತಿದ್ದರು.

    ಇದನ್ನೂ ಓದಿ: ತೆಲಂಗಾಣ ವಿಧಾನಸಭೆ ಚುನಾವಣೆ; ಕಾಂಗ್ರೆಸ್​ ಗ್ಯಾರಂಟಿಗಳಿಗೆ ಸೆಡ್ಡು ಹೊಡೆದ ಬಿಆರ್​ಎಸ್​ ಪ್ರಣಾಳಿಕೆ

    ಇವರು ಒಮ್ಮೆ ಬಂಗ್ಲಾದೇಶದಿಂದ ಚಿನ್ನವನ್ನು ಭಾರತಕ್ಕೆ ತಂದ ನಂತರ ಅದನ್ನು ಮುಂಬೈ, ನಾಗ್ಪುರ ಹಾಗೂ ವಾರಣಾಸಿಗೆ ಸಾಗಿಸುತ್ತಿದ್ದರು. ಇವರು ದೇಶಾದ್ಯಂತ ಬೃಹತ್​ ಜಾಲವನ್ನು ಹೊಂದಿದ್ದು, ಇವರು ತರಿಸುವ ಚಿನ್ನಾಭರಣಗಳಿಗೆ ವ್ಯಾಪಕ ಬೇಡಿಕೆ ಇತ್ತು ಎಂದು ತಿಳಿದು ಬಂದಿದೆ. ಇವರು ಚಿನ್ನಾಭರಣಗಳನ್ನು ರೈಲು ಹಾಗೂ ಸಾರ್ವಜನಿಕ ಸಾರಿಗೆಗಳ ಮೂಲಕ ಸಾಗಿಸುತ್ತಿದ್ದರು.

    ಇವರು ಚಿನ್ನಾಭರಣಗಳನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗ ಆರೋಪಿಗಳನ್ನು ಮುಂಬೈ, ನಾಗ್ಪುರ ಹಾಗು ಬಾರಣಾಸಿ ರೈಲು ನಿಲ್ದಾಣಗಳಲ್ಲಿ ಬಂಧಿಸಲಾಗಿದೆ. ಬಂಧಿತರಿಂದ 19 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಜನರನ್ನು ಬಂಧಿಸಲಾಗುವುದು ಎಂದು DRIನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts