ಲಿಪ್​ ಲಾಕ್​ ಸೀನ್​​ ಸ್ಕ್ರಿಪ್ಟ್​ನಲ್ಲಿರುತ್ತ ಅಥವಾ ನೀವೇ ಇರಲಿ ಎಂದು ಕೇಳ್ತೀರಾ?; ಪತ್ರಕರ್ತರ ಪ್ರಶ್ನೆಗೆ ನಾನಿ ಹೇಳಿದ್ದಿಷ್ಟು

Untitled design - 2023-10-15T192742.547
Published on

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಸ್ಟಾರ್​ ನಟ ನಾನಿ ಮತ್ತು ನಟಿ ಮೃಣಾಲ್ ಠಾಕೂರ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಹಾಯ್ ನನ್ನ' ಚಿತ್ರದ ಪ್ರಿ-ರಿಲೀಸ್​ ಇವೆಂಟ್​ನಲ್ಲಿ ಪತ್ರಕರ್ತರೊಬ್ಬರು ಕೇಳಿದ ಲಿಪ್ ಲಾಕ್​ ಪ್ರಶ್ನೆಗೆ ನಾನಿ ಕೊಟ್ಟ ಉತ್ತರ ಏನು? ಎಂಬುದೇ ಸದ್ಯ ಹಲವರ ಕುತೂಹಲಕ್ಕೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಬಿಡುಗಡೆಗೊಂಡ ಟೀಸರ್​ ನೋಡಿದ ನಾನಿ ಅಭಿಮಾನಿಗಳು ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ, ಚಿತ್ರದ ಕೆಲವು ದೃಶ್ಯಗಳಲ್ಲಿ ನಟಿ ಮೃಣಾಲ್ ಠಾಕೂರ್ ಜತೆಗೆ ನಾನಿ ಲಿಪ್-ಲಾಕ್ ಮಾಡಿರುವ ಸೀನ್​ಗಳು ಇದೀಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಟಾಲಿವುಡ್​ನಲ್ಲಿ ಬಹುಬೇಡಿಕೆಯ ನಟರ ಪೈಕಿ ನಾನಿ ಕೂಡ ಒಬ್ಬರಾಗಿದ್ದು, ಈ ಹಿಂದಿನಿಂದಲೂ ತಾವು 'ಹಾಯ್​ ನನ್ನ' ಚಿತ್ರದಲ್ಲಿ ಬ್ಯುಸಿಯಾಗಿರುವುದಾಗಿ ನಟ ಹಲವು ಬಾರಿ ತಮ್ಮ ಸಾಮಾಜಿಕ ಜಾಲತಾಣದ ಮುಖೇನ ತಿಳಿಸಿದ್ದರು. ಈಗ ಚಿತ್ರದ ಟೀಸರ್​ ಅಧಿಕೃತವಾಗಿ ಬಿಡುಗಡೆಗೊಂಡಿದ್ದು, ಪ್ರಿ-ರಿಲೀಸ್​ ಇವೆಂಟ್​ನಲ್ಲಿ ನಟ ನಾನಿಗೆ ಪತ್ರಕರ್ತರೊಬ್ಬರು ಲಿಪ್ ಲಾಕ್​ ಸೀನ್​ಗಳ ಬಗ್ಗೆ ಬಹಿರಂಗವಾಗಿ ಪ್ರಶ್ನಿಸಿದರು.

ತಮ್ಮ ಸಿನಿಮಾಗಳಲ್ಲಿ ಕಿಸ್ಸಿಂಗ್​ ಸೀನ್​ಗಳು ಸ್ಕ್ರಿಪ್ಟ್​ಗೆ ಅಗತ್ಯವಿರುವ ಕಾರಣ ಮಾಡುತ್ತಿರೋ ಅಥವಾ ನೀವೇ ನಿರ್ದೇಶಕರನ್ನು ಕೇಳಿ ಈ ಸೀನ್​ ಹಾಕಿಸಿಕೊಳ್ಳುತ್ತಿರೋ ಎಂದು ಪ್ರಶ್ನೆ ಮುಂದಿಟ್ಟರು. ಈ ಪ್ರಶ್ನೆ ತೀವ್ರ ಮುಜುಗರ ಉಂಟು ಮಾಡಿದರೂ ಕೂಡ ಉತ್ತರಿಸಿದ ನಾನಿ, ಎಲ್ಲಾ ಸಿನಿಮಾಗಳಲ್ಲಿ ಚುಂಬನದ ದೃಶ್ಯಗಳನ್ನು ಒಳಗೊಂಡಿಲ್ಲ. 'ಸುಂದರನಿಕಿ' ಮತ್ತು 'ದಸರಾ' ಚಿತ್ರಗಳಲ್ಲಿ ಯಾವುದೇ ಚುಂಬನದ ದೃಶ್ಯಗಳಿಲ್ಲ ಎಂದು ಹೇಳಿದರು.

ಸ್ಕ್ರಿಪ್ಟ್‌ನಲ್ಲಿ ಕಿಸ್ಸಿಂಗ್​​ ದೃಶ್ಯಗಳು ಇದ್ದರೆ ಅದನ್ನು ಮಾಡಬೇಕಾಗಬಹುದು. ನಟನಾಗಿ ನಿರ್ದೇಶಕರ ದೃಷ್ಟಿಗೆ ನಾವು ನಿಷ್ಠರಾಗಿರಬೇಕಾಗುತ್ತದೆ. ಅದು ನನ್ನ ವೈಯಕ್ತಿಕ ಆಯ್ಕೆಯಾಗಿರುವುದಿಲ್ಲ ಎಂದು ಶಾಂತ ಸ್ವಭಾವದಿಂದಲೇ ನಾನಿ ಉತ್ತರಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net