ಸಿದ್ದರಾಮಯ್ಯ ಭಾಷಣದ ವೇಳೆ ಕುಡುಕನ ಕಿರಿಕ್; ಏಯ್… ಅವನನ್ನ ಮೊದಲು ಇಲ್ಲಿಂದ ಕಳಿಸ್ರೀ…

ಸಿದ್ದರಾಮಯ್ಯ
Published on

ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ದೊಮ್ಮಲೂರಿನಲ್ಲಿ ನಿರ್ಮಾಣವಾಗಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಜನರನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಕುಡುಕನೊಬ್ಬ ಕಿರಿಕ್ ಮಾಡಿದ್ದಾನೆ. ಇದರಿಂದ ಸಿಟ್ಟಾದ ಸಿದ್ದರಾಮಯ್ಯ ''ಏಯ್... ಅವನನ್ನ ಮೊದಲು ಇಲ್ಲಿಂದ ಕಳಿಸ್ರೀ'' ಎಂದು ಗದರಿದ್ದಾರೆ.

ಸಿದ್ದರಾಮಯ್ಯ ಮಾಡುತ್ತಿದ್ದಾಗ ವೇದಿಕೆ ಮುಂಭಾಗ ಬಂದು ನಿಂತ ಕುಡುಕ ಭಾಷಣಕ್ಕೆ ಅಡ್ಡಿಪಡಿಸಿದ್ದಾನೆ. ಈ ವೇಳೆ ಕುಡುಕನನ್ನು ಹೊರೆಗೆ ಕಳುಹಿಸುವಂತೆ ಸಿದ್ದರಾಮಯ್ಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಕೂಡಲೇ ಪೊಲೀಸರು ಕಿರಿಕ್ ಮಾಡುತ್ತಿದ್ದ ಕುಡುಕನನ್ನು ವೇದಿಕೆಯ ಮುಂದಭಾಗದಿಂದ ಎಳೆದುಕೊಂಡು ಹೋಗಿ, ಹೊರ ಕಳುಹಿಸಿದ್ದಾರೆ.

ಕುಡುಕ ಹೊರ ಹೋಗುತ್ತಿದ್ದಂತೆ ಮತ್ತೆ ಮಾತು ಆರಂಭಿಸಿದ ಸಿದ್ದರಾಮಯ್ಯ, ಇಂಥವರು ಇರ್ತಾರೆ... ಇದಕ್ಕೆಲ್ಲ ತಲೆಕೆಡಸಿಕೊಳ್ಳಬೇಡಿ. ಕೆಲವರು ಕುಡಿದು ಬಂದಿರ್ತಾರೆ. ಇನ್ನು ಕೆಲವರಿಗೆ ಕುಡಿಸಿ ಕಳುಹಿಸುತ್ತಾರೆ ಎಂದು ಹೇಳಿ ನಗೆ ಚಟಾಕಿ ಹಾರಿಸಿದರು.

ಮಾಜಿ ಸಚಿವ ಎಚ್.ಎಂ ರೇವಣ್ಣ ಭಾಷಣ ಮಾಡುವ ವೇಳೆಯೂ ಕುಡಕ ಕಿರಿಕ್ ಮಾಡಿದ್ದ. ಸಿದ್ದರಾಮಯ್ಯ ಬಡವರಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ರೇವಣ್ಣ ಹೇಳಿದಾಗ, ಏನ್ ಸಹಾಯ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದ. ಕುಡುಕನ ಪ್ರಶ್ನೆಗೆ ಎಚ್.ಎಂ ರೇವಣ್ಣ ಗರಂ ಆದ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net