ಸಂಕ್ರಾಂತಿ ವಿಶೇಷ ಲಾಟರಿ; ಒಬ್ಬ ಅದೃಷ್ಟಶಾಲಿಗೆ ಸಿಗಲಿದೆ 5 ಕೋಟಿ ರೂ.!

Lottery
Published on

ಪಂಜಾಬ್: ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿದೆ. ಈ ಸಂದರ್ಭ ಪಂಜಾಬ್ ರಾಜ್ಯ ಲಾಟರಿ ನಿರ್ದೇಶನಾಲಯ ಮಕರ ಸಂಕ್ರಾಂತಿ ಹಬ್ಬದ ಬಂಪರ್ ಲಾಟರಿ ವ್ಯವಹಾರ ಘೋಷಿಸಿದೆ.

ಆನ್​ಲೈನ್ ಮೂಲಕ ಯಾರು ಬೇಕಾದರೂ ಈ ಲಾಟ್ರಿಯನ್ನು 500 ರೂ. ನೀಡಿ ಖರೀದಿಸಬಹುದಾಗಿದೆ. ಸಂಕ್ರಾಂತಿ ಹಿನ್ನೆಲೆಯಲ್ಲಿ ಮಾರಾಟವಾಗುತ್ತಿರುವ ಈ ಲಾಟರಿ ಟಿಕೆಟ್​ನ ಬಹುಮಾನದ ಮೊತ್ತವೂ ಅಧಿಕಾವಗಿದೆ. ಅಂತೆಯೇ ಮೊದಲ ಬಹುಮಾನ ಪಡೆದುಕೊಳ್ಳುವ ಅದೃಷ್ಟಶಾಲಿಗೆ ಬರೋಬ್ಬರಿ 5 ಕೋಟಿ. ರೂಪಾಯಿ ಸಿಗಲಿದೆ. ಕ್ರಮವಾಗಿ ದ್ವಿತೀಯ 50 ಲಕ್ಷ ರೂ. ಹಾಗೂ ತೃತೀಯ 25 ಲಕ್ಷ ರೂ. ಬಹುಮಾನ ಸಿಗಲಿದೆ.

ಸದ್ಯ ಈ ಲಾಟರಿ ಟಿಕೆಟ್​ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಬಹುತೇಕ ಮಂದಿ ಈಗಾಗಲೇ ಸಂಕ್ರಾಂತಿ ಹಬ್ಬದ ವಿಶೇಷ ಲಾಟರಿ ಟಿಕೆಟ್​ನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಬರೋಬ್ಬರಿ 5 ಕೋಟಿ ರೂಪಾಯಿ ಬಹುಮಾನ ಇರುವ ಲಾಟರಿ ಟಿಕೆಟ್​ನ ಪ್ರಥಮ ಬಹುಮಾನ ಪಡೆದುಕೊಳ್ಳುವ ಅದೃಷ್ಟಶಾಲಿ ಯಾರಾಗಲಿದ್ದಾರೆ ಎಂಬ ಕುತೂಹಲ ಇದೀಗ ಎಲ್ಲರಲ್ಲಿದೆ. ಸದ್ಯ ವಿಜಯಶಾಲಿ ಯಾರೆಂಬುದು ಜನವರಿ 16 ರಂದು ಸಂಜೆ 6 ಗಂಟೆಗೆ ಬಹಿರಂಗವಾಗಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net