ಕುಡಿದ ಮತ್ತಿನಲ್ಲಿ Current Wire ಮೇಲೆ ಮಲಗಿದ ವ್ಯಕ್ತಿ; ಈತನ ಕಾರಣ ಕೇಳಿ ಪೊಲೀಸರು ಶಾಕ್​

Drunk Man
Published on

ಅಮರಾವತಿ: ವಿಶ್ವದಾದ್ಯಂತ 2024ಕ್ಕೆ ಟಾಟಾ ಹೇಳಿ 2025 ಹೊಸವರ್ಷವನ್ನು ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಗಿದ್ದು, ಬೆಂಗಳೂರು ಸೇರಿದಂತೆ ಹಲವೆಡೆ ಭರ್ಜರಿ ಪಾರ್ಟಿ ಮಾಡಲಾಗಿದೆ. ಆದರೆ, ಇಲ್ಲೊಬ್ಬ ಯುವಕ ಕುಡಿದ ನಶೆಯಲ್ಲಿ ಕರೆಂಟ್​ ವೈರ್​ (Current Wire) ಮೇಲೆ ಮಲಗಿಕೊಂಡು ಹುಚ್ಚಾಟ ಮೆರೆದಿದ್ದು, ಇದಕ್ಕೆ ಆತ ನೀಡಿರುವ ಕಾರಣ ಮಾತ್ರ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಆಂಧ್ರಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಪಾಲಕೊಂಡ ಮಂಡಲದ ಎಂ. ಸಿಂಗಪುರಂ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದ್ಯ ಸೇವಿಸಲು ಅಮ್ಮ ಹಣ ನೀಡಲಿಲ್ಲ ಎಂದು ವೆಂಕಣ್ಣ ಎಂಬಾತ ಕರೆಂಟ್​ ಕಂಬ ಏರಿ ವೈರ್​ಗಳ (Current Wire) ಮೇಲೆ ಮಲಗಿಕೊಂಡಿದ್ದು, ಸದ್ಯ ಘಟನೆಯು ಸಖತ್ ಸೌಂಡ್​ ಮಾಡುತ್ತಿದೆ.

ಘಟನೆ ಕುರಿತು ಮಾತನಾಡಿರುವ ಗ್ರಾಮಸ್ಥರೊಬ್ಬರು, ತನ್ನ ತಾಯಿಗೆ ಪಿಂಚಣಿ ಬಂದಿರುವ ವಿಚಾರ ತಿಳಿದ ವೆಂಕಣ್ಣ ಕುಡಿಯಲು ಹಣ ಕೇಳಿದ್ದಾನೆ. ಆದರೆ, ಆಕೆ ಹಣ ಕೊಡಲು ಒಪ್ಪಿಲ್ಲ. ಇದರಿಂದ ಸಿಟ್ಟಿಗೆದ್ದ ವೆಂಕಣ್ಣ ಕರೆಂಟ್​ ಕಂಬ ಏರಿ ವೈರ್​ಗಳ (Current Wire) ಮೇಲೆ ಮಲಗಿಕೊಂಡಿದ್ದಾನೆ. ಕೂಡಲೇ ಎಚ್ಚೆತ್ತ ಗ್ರಾಮಸ್ಥರು ವಿದ್ಯುತ್ ಡಿಪಿ ಸ್ವಿಚ್ ಆಫ್ ಮಾಡಿದ್ದು, ಆತನನ್ನು ಕೆಳಗಿಳಿಸುವ ಪ್ರಯತ್ನ ಮಾಡಿದ್ದಾರೆ.

ಸುಮಾರು ಅರ್ಧಗಂಟೆಗೂ ಹೆಚ್ಚಿನ ಕಾಲ ಆತ ಕರೆಂಟ್​ ಕಂಬದ ಮೇಲಿದ್ದುಕೊಂಡೆ ಹುಚ್ಚಾಟ ಮಾಡಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಪೊಲೀಸ್​  ಅಧಿಕಾರಿಗಳು ಬಂದಿದ್ದು, ಗ್ರಾಮಸ್ಥರು ಹಾಗೂ ಪೊಲೀಸ್​ ಅಧಿಕಾರಿಗಳು ಆತನ ಮನವೊಲಿಸಿ ಕೆಳಗಿಳಿಸಿದ್ದು, ಪೊಲೀಸರು ವಿಚಾರಿಸಿದಾಗ ಆತ ತನ್ನ ತಾಯಿ ಕುಡಿಯಲು ಹಣ ಕೊಡದಿದ್ದಕ್ಕೆ ಈ ರೀತಿ ಮಾಡಿದ್ದಾಗಿ ಹಾರಿಕೆ ಉತ್ತರವನ್ನು ನೀಡಿದ್ದಾನೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net