NewYear ಸಂಭ್ರಮಾಚರಣೆಯಲ್ಲಿ ದುರಂತ; ಜನಸಂದಣಿ ಮೇಲೆ ಲಾರಿ ಹರಿದು 10 ಮಂದಿ ಸಾವು.. 30 ಜನರಿಗೆ ಗಾಯ

Accident
Published on

ನವದೆಹಲಿ: ಹೊಸ ವರ್ಷಾಚರಣೆ (NewYear) ವೇಳೆ ಜನಸಂದಣಿಯ ಮೇಲೆ ಲಾರಿ ಹರಿದ ಪರಿಣಾಮ 10 ಮಂದಿ ಮೃತಪಟ್ಟು, 30ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೆಕ್ಸಿಕೋದ ನ್ಯೂ ಓರ್ಲಿಯನ್ಸ್‌ನ ಫ್ರೆಂಚ್ ಕ್ವಾರ್ಟರ್‌ನಲ್ಲಿರುವ ಬೌರ್ಬನ್ ಸ್ಟ್ರೀಟ್‌ನಲ್ಲಿ ನಡೆದಿದೆ. 

ಘಟನೆ ಕುರಿತು ಪ್ರತಿಕ್ರಿಯಿಸಿರುವ ನಗರದ ಮೇಯರ್​ ಇದೊಂದು ಭಯೋತ್ಪಾದಕ ದಾಳಿ ಎಂದು ಆರೋಪಿಸಿದ್ದು, ಇದಕ್ಕೆ ಪ್ರತಿಯಾಗಿ ಎಫ್​ಬಿಐ ಐ ಘಟನೆ ಭಯೋತ್ಪಾದಕ ದಾಳಿಯಲ್ಲ ಎಂದು ಸ್ಪಷ್ಟಪಡಿಸಿದೆ.

ದುರ್ಘಟನೆ ಕುರಿತು ಮಾತನಾಡಿರುವ ಪ್ರತ್ಯಕ್ಷದರ್ಶಿಯೊಬ್ಬರು, ವೇಗವಾಗಿ ಬರುತ್ತಿದ್ದ ಲಾರಿಯಿಂದ ಜಿಗಿದ ವ್ಯಕ್ತಿಯೋರ್ವ ಅಲ್ಲಿದ್ದವರ ಮೇಲೆ ಗುಂಡು ಹಾರಿಸಲು ಶುರು ಮಾಡಿದ. ಬಳಿಕ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದು, ಅಷ್ಟರಲ್ಲಾಗಲೇ ಲಾರಿ ಹರಿದು 10 ಮಂದಿ ಮೃತಪಟ್ಟಿದ್ದರು ಎಂದು ಘಟನೆ ಕುರಿತು ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಪೊಲೀಸ್​ ಇಲಾಖೆಯ ವಕ್ತಾರರೊಬ್ಬರು, ಜನರ ಮೇಲೆ ವಾಹನವನ್ನು ಹರಿಸುವ ಬಗ್ಗೆ ಮೊದಲೇ ನಮಗೆ ಮಾಹಿತಿ ಲಭಿಸಿತ್ತು. ಸಾವುಗಳ ಬಗ್ಗೆ ವರದಿಯಾಗಿದ್ದು, ಗಾಯಾಳುಗಳ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಘಟನೆಯು ಹೊಸ ವರ್ಷದಂದು ಸಂಭವಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಇಲಾಖೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net