

ಹೈದರಾಬಾದ್: ಮದ್ಯ ಕುಡಿದು ವಾಹನ ಚಾಲನೆ ಮಾಡುವವರು ಟೆರರಿಸ್ಟ್ಗಳು(ಭಯೋತ್ಪಾಕರು) ಎಂದು ಹೈದರಾಬಾದ್ ಪೊಲೀಸ್ ಆಯುಕ್ತ(Police Commissioner) ವಿ.ಎಸ್.ಸಜ್ಜನರ್ ಹೇಳಿದ್ದಾರೆ.
ಹೈದರಾಬಾದ್-ಬೆಂಗಳೂರು ಖಾಸಗಿ ಸ್ಲೀಪರ್ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು 19 ಪ್ರಯಾಣಿಕರು ಮತ್ತು ಬೈಕ್ ಚಾಲಕ ಮೃತಪಟ್ಟ ಘಟನೆ ಉಲ್ಲೇಖಿಸಿ, ದುರಂತದಲ್ಲಿ ಮೃತಪಟ್ಟ ಬೈಕ್ ಸವಾರ ಕುಡಿದಿದ್ದ ಕಾರಣ ಅಪಘಾತ ಸಂಭವಿಸಿದೆ ಎಂದು ಅಧಿಕಾರಿ ಆಯುಕ್ತ ವಿ.ಎಸ್.ಸಜ್ಜನರ್ ಹೇಳಿದರು.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಸಜ್ಜನರ್, ''ಇಂತಹ ಕೃತ್ಯಗಳು ರಸ್ತೆಯಲ್ಲಿ ನಡೆಯುವ ಭಯೋತ್ಪಾದ ಕೃತ್ಯಗಳು. ಅಷ್ಟೇ ಅಲ್ಲ ಈ ಘಟನೆಯನ್ನು ನಿರ್ಲಕ್ಷ್ಯದ ಘಟನೆ'' ಎಂದು ಖಡಕ್ ಸಂದೇಶ ರವಾನಿಸಿದರು.
ಕುಡಿದ ವಾಹನ ಸವಾರರು ಭಯೋತ್ಪಾದಕರು ಮತ್ತು ಅವರ ಕೃತ್ಯಗಳು ನಮ್ಮ ರಸ್ತೆಗಳಲ್ಲಿ ನಡೆಯುವ ಭಯೋತ್ಪಾದಕ ಕೃತ್ಯಗಳಿಗಿಂತ ಕಡಿಮೆಯಿಲ್ಲ. 20 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಭೀಕರ ಕರ್ನೂಲ್ ಬಸ್ ಅಪಘಾತವು ನಿಜವಾದ ಅರ್ಥದಲ್ಲಿ ಅಪಘಾತವಲ್ಲ. ಇದು ಕುಡಿದ ಮತ್ತಿನಲ್ಲಿ ಬೈಕ್ ಸವಾರನ ಅಜಾಗರೂಕ ಮತ್ತು ಬೇಜವಾಬ್ದಾರಿ ವರ್ತನೆಯಿಂದ ಉಂಟಾದ ತಡೆಗಟ್ಟಬಹುದಾದ ಹತ್ಯಾಕಾಂಡವಾಗಿತ್ತು. ಇದು ರಸ್ತೆ ಅಪಘಾತವಲ್ಲ, ಆದರೆ ಕೆಲವೇ ಸೆಕೆಂಡುಗಳಲ್ಲಿ ಇಡೀ ಕುಟುಂಬಗಳನ್ನು ನಾಶಮಾಡುವ ನಿರ್ಲಕ್ಷ್ಯದ ಕ್ರಿಮಿನಲ್ ಕೃತ್ಯ" ಎಂದು ಅವರು X ನಲ್ಲಿ ಪೋಸ್ಟ್‌ನಲ್ಲಿ ಆಯುಕ್ತ ಸಜ್ಜನರ್ ಬರೆದಿದ್ದಾರೆ
ಶುಕ್ರವಾರ (ಅ.24) ಮುಂಜಾನೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನತೇಕೂರಿನಲ್ಲಿ ಭೀಕರ ಅಪಘಾತಕ್ಕೀಡಾಯಿತು. ರಸ್ತೆ ಮೇಲೆ ಬಿದ್ದಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಬಸ್, ಬೈಕನ್ನು ಸುಮಾರು 300 ಮೀಟರ್‌ಗಳಷ್ಟು ಎಳೆದುಕೊಂಡು ಹೋಗಿದೆ. ಈ ವೇಳೆ ಬೆಂಕಿಯ ಕಿಡಿ ಹರಡಿ, ಇಡೀ ಬಸ್ ಬೆಂಕಿಗೆ ಆಹುತಿಯಾಯಿತು. ಈ ಅಪಘಾತದಲ್ಲಿ ಇಬ್ಬರು ಮಕ್ಕಳು ಮತ್ತು ಆರು ಮಹಿಳೆಯರು ಸೇರಿದಂತೆ ಒಟ್ಟು 19 ಜನರು ಸಜೀವ ದಹನವಾದರು. ಅಪಘಾತದ ಸಮಯದಲ್ಲಿ ಇಬ್ಬರು ಚಾಲಕರು ಮತ್ತು ನಾಲ್ವರು ಮಕ್ಕಳು ಸೇರಿದಂತೆ ಒಟ್ಟು 46 ಜನರು ಬಸ್‌ನಲ್ಲಿದ್ದರು. (ಏಜೆನ್ಸೀಸ್)