'ಆ ವ್ಯಕ್ತಿ ಬಗ್ಗೆ ಮಾತನಾಡಿ ನಾನೇ ಡಿಗ್ರೇಡ್ ಮಾಡಿಕೊಳ್ಳಲ್ಲ' ಎಂದ ಕುಮಾರಸ್ವಾಮಿ

HDK
Published on

ಬೆಂಗಳೂರು: ಬೆಳಗಿನ ಜಾವ 3ರಿಂದ 4 ಗಂಟೆಯವರೆಗೂ ಡಾನ್ಸ್ ಬಾರ್‌ಗಳಲ್ಲಿ ಪಾರ್ಟಿಗಳು ನಡೆಯುತ್ತವೆ. ಅದೇ ಡ್ರಗ್ಸ್ ಬಳಸುವ ಮೊದಲ ಮೂಲ. ಲೀ ಮೆರಿಡಿಯನ್ ಹೋಟೆಲ್‌ನಲ್ಲಿ ಬೆಳಗಿನವರೆಗೆ ನಡೆಯುತ್ತಿತ್ತು. ಅನೇಕ ಹೆಣ್ಣುಮಕ್ಕಳು ರಸ್ತೆಯಲ್ಲಿ ಬಿದ್ದಿರುವುದನ್ನು ಜನ ನೋಡಿದ್ದಾರೆ. ಮಲ್ಯ ರಸ್ತೆಯ ಮೈಕ್ರೋ ಬ್ರೀವರಿಸ್ ಯಾರದ್ದು? ಸರ್ಕಾರದಲ್ಲಿರುವವರೇ ಈ ರೆಸ್ಟೋರೆಂಟ್‌ಗೆ ಹೂಡಿಕೆ ಮಾಡಿದ್ದಾರೆ. ಪಾಪದ ಹಣವನ್ನು ಇದಕ್ಕೆ ತೊಡಗಿಸ್ತಿದ್ದಾರೆ. ಈ ಬಗ್ಗೆ ಪ್ರಾಮಾಣಿಕ ತನಿಖೆ ನಡೆಸಿದ್ದರಷ್ಟೇ ತಾರ್ಕಿಕ ಅಂತ್ಯ ಕಾಣಿಸಬಹುದು ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ಡ್ರಗ್ಸ್​ ಕೇಸ್​ನಲ್ಲಿ ಬರೀ ಮೂರ್ನಾಲ್ಕು ಜನರನ್ನು ಹಿಡಿದುಕೊಂಡು ಎಳೆದಾಡಿದ್ರೆ ಪ್ರಯೋಜನ ಆಗಲ್ಲ. ರಾಜಕಾರಣಿಗಳು ಮಾತ್ರವಲ್ಲ, ಹಲವು ಅಧಿಕಾರಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಿದರೆ ಹಾರಿಕೆ ಉತ್ತರ ಸಿಗಲಿದೆಯಷ್ಟೆ ಎಂದು ಅಸಮಾಧಾನ ಹೊರಹಾಕಿದರು.

ಡಾನ್ಸ್ ಬಾರ್​, ಕ್ರಿಕೆಟ್ ಬೆಟ್ಟಿಂಗ್ ಹಣ ಬಳಸಿ ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಲಾಯಿತು ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಇತ್ತೀಚಿಗೆ ಎಚ್​.ವಿಶ್ವನಾಥ್​ ಟೀಕಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಎಚ್​ಡಿಕೆ, ಆ ವ್ಯಕ್ತಿ ಬಗ್ಗೆ ಮಾತನಾಡಿ ನಾನೇ ಡಿಗ್ರೇಡ್ ಮಾಡಿಕೊಳ್ಳಲ್ಲ. ಆ ವ್ಯಕ್ತಿಯ ಅಭಿರುಚಿ ಏನು ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್​​ನಲ್ಲೂ ಸರ್ಕಾರ ತೆಗಿಯಬೇಕು ಎಂದು ಕೆಲವು ಇದ್ದರು. ನಾನು ಮತ್ತಲ್ಲಿ ಮಲಗಿರಲಿಲ್ಲ. ಈ ರಾಜ್ಯಕ್ಕೆ ನನ್ನದೇ ಆದ ಕೊಡುಗೆ ಕೊಟ್ಟಿದ್ದೀನಿ ಎಂದರು.

ಡ್ರಗ್ಸ್​ ವಿಚಾರವಾಗಿ ಇನ್ನು ಹದಿನೈದು ದಿನ ಕಳೆದರೆ ಎಲ್ಲವೂ ನಿಮಗೆ ಗೊತ್ತಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net