ಡ್ರಗ್ಸ್​ ಪೆಡ್ಲರ್​ ಜತೆ ನಟ ದಿಗಂತ್​ ಚಾಟಿಂಗ್​...

diganth-drugcase
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟ ದಿಗಂತ್​ ಮಂಚಾಲೆ, ಆಫ್ರಿಕಾದ ಶಂಕಿತ ಡ್ರಗ್ಸ್​ ಪೆಡ್ಲರ್​ ಜತೆ ಮೊಬೈಲ್​ನಲ್ಲಿ ವಿನಿಮಯ ಮಾಡಿಕೊಂಡಿರುವ ಮೆಸೇಜ್ ಸೇರದಿಂತೆ ಕೆಲ ಸಂದೇಶಗಳನ್ನು ಡಿಲೀಟ್​ ಮಾಡಿಕೊಂಡಿದ್ದಾರೆ ಎಂಬುದು ಸಿಸಿಬಿ ಪೊಲೀಸ್​ ವಿಚಾರಣೆ ವೇಳೆ ಬಯಲಾಗಿದೆ.

ಡ್ರಗ್ಸ್​ ಕೇಸ್​ ಸಂಬಂಧ ಈಗಾಗಲೇ ಎರಡು ಬಾರಿ ಸಿಸಿಬಿ ವಿಚಾರಣೆ ಎದುರಿಸಿರುವ ದಿಗಂತ್​ಗೆ ಅಗತ್ಯವಿದ್ದಲ್ಲಿ ಮತ್ತೊಮ್ಮೆ ವಿಚಾರಣೆಗೆ ಕರೆಯುವುದಾಗಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಬೆಂಗಳೂರಿನಿಂದ ಹೊರ ಹೋಗದಂತೆ ದಿಗಂತ್​ಗೆ ಸೂಚಿಸಿರುವ ಅಧಿಕಾರಿಗಳು, ಶೂಟಿಂಗ್​ ಹೊರತುಪಡಿಸಿ ಬೇರೆ ಕಡೆ ಪ್ರಯಾಣ ಕೈಗೊಳ್ಳುವುದಾದರೆ ಸಿಸಿಬಿಗೆ ತಿಳಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿರಿ ಡ್ರಗ್ಸ್ ಕೇಸ್​; ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ಬುಲಾವ್​​

ಡ್ರಗ್ಸ್​ ಕೇಸ್​ನ ಪ್ರಮುಖ ಆರೋಪಿ ಶೇಖ್ ಫಾಝಿಲ್​ನ ಕ್ಯಾಸಿನೋ ಪಾರ್ಟಿಗೆ ಬರುವಂತೆ ವಿಡಿಯೋ ಮೂಲಕ ನಟಿ ಐಂದ್ರಿತಾ ಗಣ್ಯರನ್ನು ಆಹ್ವಾನಿಸಿದ್ದರು. ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಡ್ರಗ್ಸ್​ ಕೇಸ್​ನಲ್ಲಿ ಫಾಝಿಲ್​ ಹೆಸರು ಕೇಳಿಬರುತ್ತಿದ್ದಂತೆ ಈ ವಿಡಿಯೋ ಭಾರೀ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಅಂದರೆ ಸೆ.16ರಂದು ತಾರಾದಂಪತಿ ಐಂದ್ರಿತಾ ಮತ್ತು ದಿಗಂತ್​ ಇಬ್ಬರಿಗೂ ಸಿಸಿಬಿ ನೋಟಿಸ್​ ಜಾರಿ ಮಾಡಿತ್ತು. ಅದರಂತೆ ಅವರಿಬ್ಬರೂ ಸೆ.17ರಂದು ವಿಚಾರಣೆಗೆ ಹಾಜರ್​ ಆಗಿದ್ದರು.

ಸೆ.23ರಂದು ಮತ್ತೊಮ್ಮೆ ನೋಟಿಸ್​ ಜಾರಿ ಮಾಡಿದ್ದ ಸಿಸಿಬಿ, ದಿಗಂತ್​ ಒಬ್ಬರನ್ನು ಮಾತ್ರ ವಿಚಾರಣೆಗೆ ಕರೆದಿತ್ತು. ಅದರಂತೆ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಬಂದಿದ್ದ ದಿಗಂತ್​ ಸತತ 3 ಗಂಟೆ ಕಾಲ ವಿಚಾರಣೆ ಎದುರಿಸಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ದಿಗಂತ್​, ಮತ್ತೊಮ್ಮೆ ಕರೆದರೆ ವಿಚಾರಣೆಗೆ ಹಾಜರ್​ ಆಗ್ತೀನಿ ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net