ಬ್ರೌನ್​ ಶುಗರ್​ ಮಾರುತ್ತಿದ್ದಾಗ ಸಿಕ್ಕಿಬಿದ್ದ ಖದೀಮ

drugs
Published on

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬ್ರೌನ್ ಶುಗರ್ ಮಾರಾಟ ಮಾಡುತ್ತಿದ್ದ ಡ್ರಗ್​ ಪೆಡ್ಲರನ್ನು ಬಂಧಿಸಲಾಗಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರದ ಅಸ್ಬಾಭಾಗ್ ನಿವಾಸಿ ಎನ್ನಲಾದ ಮಹಮ್ಮದ್ ಜಾಫರ್ ಗುಡುಮಿಯಾ(28) ಬಂಧಿತ ಆರೋಪಿ.

ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಇಂದು ಬ್ರೌನ್ ಶುಗರ್ ಮಾರಾಟ ಮಾಡುತ್ತಿದ್ದಾಗ ಆರೋಪಿಯನ್ನು ಸರ್ಕಲ್ ಇನ್​​ಸ್ಪೆಕ್ಟರ್ ಶ್ರೀಕಾಂತ್ ನೇತೃತ್ವದ ತಂಡ ಪತ್ತೆ ಹಚ್ಚಿದೆ. ಆರೋಪಿಯ ಬಳಿಯಿಂದ 40,000 ರೂಪಾಯಿ ಮೌಲ್ಯದ 1 ಕೆ.ಜಿ. 800 ಗ್ರಾಂ ತೂಕದ ಗಾಂಜಾ ಹಾಗೂ 10,000 ರೂ. ಮೌಲ್ಯದ 1 ಗ್ರಾಂ ಬ್ರೌನ್ ಶುಗರ್ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net