ಟ್ವಿಟರ್​ನಲ್ಲಿ ಪ್ರಶ್ನೆಯೊಂದನ್ನು ಕೇಳಿ ಪೇಚಿಗೆ ಸಿಲುಕಿದ ಡ್ರೋನ್​ ಪ್ರತಾಪ್​...!

Drone Prathap
Published on

ಬೆಂಗಳೂರು: ಸಾಮಾಜಿಕ ಜಾಲತಾಣಿಗರ ತೀವ್ರ ಟೀಕೆಗೆ ಗುರಿಯಾಗಿರುವ ನಕಲಿ ಯುವ ವಿಜ್ಞಾನಿ ಖ್ಯಾತಿಯ ಡ್ರೋನ್​ ಪ್ರತಾಪ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಪ್ರಶ್ನೆಯೊಂದನ್ನು ಕೇಳವ ಮೂಲಕ ನೆಟ್ಟಿಗರಿಂದ ಮತ್ತೆ ಮುಖಭಂಗ ಅನುಭವಿಸಿದ್ದಾರೆ.

ಇಂದು ಬೆಳಗ್ಗೆ ಟ್ವೀಟ್​ ಮಾಡಿರುವ ಪ್ರತಾಪ್​, ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹಾಗೂ ಬೆಂಬಲಕ್ಕೆ ನನ್ನ ಧನ್ಯವಾದಗಳು. ಮುಂದೆ ನಾನೇನು ಮಾಡಬೇಕು? ಎಂದು ನೆಟ್ಟಿಗರನ್ನು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು ಪತ್ರಿಕಾಗೋಷ್ಠಿ ಕರೆದು ಮೊದಲು ಎಲ್ಲವನ್ನು ಸ್ಪಷ್ಟಪಡಿಸು, ಇಲ್ಲವಾದರೆ ಹೊರಗೆ ಬರಬೇಡ ಎಂದಿದ್ದಾರೆ. ಮತ್ತೋರ್ವ, ಬಹಿರಂಗಪಡಿಸಲು ಸಾಧ್ಯವಿಲ್ಲ. ಈಮೇಲ್​ ಐಡಿ ಕಳಿಸು ಎಂದು ಕಾಲೆಳೆದಿದ್ದಾರೆ. ಡ್ರೋನ್​ ಬಗೆಗಿನ ಟೆಕ್ನಾಲಜಿಯನ್ನು ಲೈವ್​ ಆಗಿ ವಿವರಿಸು ಎಂದು ಸವಾಲು ಹಾಕಿದ್ದಾರೆ.

ಈ ಎಲ್ಲ ಪ್ರತಿಕ್ರಿಯೆಗಳಿಗೆ ಡ್ರೋನ್​ ಪ್ರತಾಪ್​ ಅವರು ಯಾವ ರೀತಿಯಲ್ಲಿ ಉತ್ತರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net