VIDEO| ಉರುಳಿಬಿದ್ದ ವೇಗದ ಟ್ರಕ್​: 5 ವಾಹನಗಳಿಗೆ ಡಿಕ್ಕಿ, ಭೀಕರ ಅಪಘಾತದಲ್ಲಿ ನಡೆಯಿತು ಪವಾಡ!

Truck Accident
Published on

ಒಟ್ಟಾವಾ: ಕಿರಿದಾದ ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಬೃಹತ್​ ಟ್ರಕ್​ ಒಂದು ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿಬಿದ್ದು ಐದು ವಾಹನಗಳಿಗೆ ಡಿಕ್ಕಿ ಹೊಡೆದ ಭೀಕರ ರಸ್ತೆ ಅಪಘಾತ ಕೆನಾಡದಲ್ಲಿ ನಡೆದಿದೆ.

ಬ್ರಿಟಿಷ್​ ಕೊಲಂಬಿಯಾದ ಕ್ರಿಸ್​ ವಿಲ್ಲೋಕ್ಸ್​ (44) ಎಂಬಾತ ಬೆಟ್ಟಗುಡ್ಡಗಳ ನಡುವಿನ ಕಡಿದಾದ ಕೆನಡಾ ಹೆದ್ದಾರಿಯಲ್ಲಿ ಪಿಕ್​ಅಪ್​ ಟ್ರಕ್ ಚಲಾಯಿಸಿಕೊಂಡು ಬರುತ್ತಿದ್ದ. ಕಳೆದ ಗುರುವಾರ ಸಂಜೆ 6.30ರ ಸುಮಾರಿಗೆ ಟ್ರಕ್​ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲೆಯೇ ಉರುಳಿಬಿದ್ದಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ವಾಹನವೊಂದರ ಹಿಂದೆ ಹಾಗೂ ಟ್ರಕ್​ ಎದುರು ಬರುತ್ತಿದ್ದ ವಾಹನದಲ್ಲಿದ್ದವರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ವೇಗವಾಗಿ ಬಂದ ಟ್ರಕ್ ತಿರುವಿನಲ್ಲಿ​ ಉರುಳಿಬಿದ್ದು ಸುಮಾರು 50 ಮೀಟರ್​ ಉಜ್ಜಿಕೊಂಡು ಹೋಗಿ ಎದುರು ಬರುತ್ತಿದ್ದ ಐದು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದವರ ವಾಹನಕ್ಕೂ ಗುದ್ದಿ ಅಲ್ಲೆ ನಿಂತಿದೆ.

ಅದೃಷ್ಟವಶಾತ್​ ಅಪಘಾತದಲ್ಲಿ ಯಾರೊಬ್ಬರು ಗಾಯಗೊಂಡಿಲ್ಲ. ಇದನ್ನು ವರ್ಣಿಸಿರುವ ರಾಯಲ್​ ಕೆನಡಿಯನ್​ ಮೌಂಟೆಡ್​ ಪೊಲೀಸ್​, ಇದು ಭಾರಿ ಅದೃಷ್ಟ ಎಂದಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿದ್ದ ಟ್ರಕ್​ ಚಾಲಕ ವಿಲ್ಲೋಕ್ಸ್ ಸೇರಿದಂತೆ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ಡಿಸ್ಚಾರ್ಜ್​ ಮಾಡಿಸಲಾಗಿದೆ. ಸದ್ಯ ವಿಡಿಯೋ ಭಾರಿ ವೈರಲ್​ ಆಗಿದೆ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮೇಲ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net