ಬುಧವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 58 ಮಿ.ಮೀ ಮಳೆ ದಾಖಲಾಗಿದೆ. ಜಿಲ್ಲೆಯ ಗರಿಷ್ಠ ಮಳೆ ಉಳ್ಳಾಲದಲ್ಲಿ 73 ಮಿಮಿ ಮಳೆಯಾಗಿದೆ. ಮೂಡುಬಿದಿರೆ 48 ಮಿ.ಮೀ, ಕಡಬದಲ್ಲಿ 36 ಮಿಮಿ, ಬೆಳ್ತಂಗಡಿ 49 ಮಿ.ಮೀ, ಬಂಟ್ವಾಳ 39.7 ಮಿ.ಮೀ, ಪುತ್ತೂರು 37.3 ಮಿ.ಮೀ, ಮಂಗಳೂರಿನಲ್ಲಿ 65.1 ಮಿಮಿ ಮಳೆಯಾಗಿದೆ. ಸುಳ್ಯದಲ್ಲಿ 63.7 ಮಿ.ಮೀ., ಮೂಲ್ಕಿ 53.4 ಮಿ.ಮೀ. ಮಳೆ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನೇತ್ರಾವತಿ ನದಿ (ಬಂಟ್ವಾಳ) 6.080 ಮೀ, ನೇತ್ರಾವತಿ ನದಿ (ಉಪ್ಪಿನಂಗಡಿ) 24.6 ಮೀ, ಕುಮಾರಧಾರ ನದಿ (ಪುಲಿಕ್ಕುಕ್ಕು) 79.465 ಮೀ, ಗುರುಪುರ ನದಿ (ಅಡ್ಡೂರು) 2.7 ಮೀ ನೀರಿದೆ. ನದಿಗಳ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ತಗ್ಗು ಪ್ರದೇಶಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ನದಿ ತೀರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.