ಡಿಆರ್‌ಡಿಒ 'ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್‌' ಹಾರಾಟ ಪರೀಕ್ಷೆ ಯಶಸ್ವಿ| drdo

drdo air diffence
Published on

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಒಡಿಶಾದ ಕರಾವಳಿಯಲ್ಲಿ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ (IADWS) ನ ಮೊದಲ ಹಾರಾಟ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ಆಪರೇಷನ್ ಸಿಂಧೂರ್ ನಂತರ ಮೂರುವರೆ ತಿಂಗಳ ಬಳಿಕ ಈ ಹೊಸ ವಾಯು ರಕ್ಷಣಾ ವ್ಯವಸ್ಥೆಯ ಹಾರಾಟ ಪರೀಕ್ಷೆಗಳು ನಡೆದಿವೆ.

IADWS ಎಂಬುದು ಬಹು ಪದರದ ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು, ಎಲ್ಲಾ ಸ್ಥಳೀಯ ತ್ವರಿತ ಪ್ರತಿಕ್ರಿಯೆ ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳು, ಬಹಳ ಕಡಿಮೆ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆ ಕ್ಷಿಪಣಿಗಳು ಮತ್ತು ಲೇಸರ್ ಆಧಾರಿತ ಶಕ್ತಿ ಶಸ್ತ್ರಾಸ್ತ್ರಗಳ ವ್ಯವಸ್ಥೆಯನ್ನು ಒಳಗೊಂಡಿದೆ. ಈ ಎಲ್ಲಾ ಶಸ್ತ್ರಾಸ್ತ್ರ ವ್ಯವಸ್ಥೆಯ ಘಟಕಗಳ ಸಮಗ್ರ ಕಾರ್ಯಾಚರಣೆಯನ್ನು ರಕ್ಷಣಾ ಸಂಶೋಧನೆ ಮತ್ತು ಪ್ರಯೋಗಾಲಯವು ಅಭಿವೃದ್ಧಿಪಡಿಸಿದ ಕೇಂದ್ರೀಕೃತ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವು ನಿಯಂತ್ರಿಸುತ್ತದೆ. ಕ್ಷಿಪಣಿ ವ್ಯವಸ್ಥೆಗಳು, ಡ್ರೋನ್ ಪತ್ತೆ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯ ನಿಯಂತ್ರಣದ ಜೊತೆಗೆ ಸಂವಹನ ಮತ್ತು ರಾಡಾರ್‌ಗಳು ಸೇರಿದಂತೆ ಎಲ್ಲಾ ಶಸ್ತ್ರಾಸ್ತ್ರ ವ್ಯವಸ್ಥೆಯ ಘಟಕಗಳು ದೋಷರಹಿತವಾಗಿ ಕಾರ್ಯನಿರ್ವಹಿಸಿದವು. ಇನ್ನೂ ಈ ಪರೀಕ್ಷೆಯನ್ನು DRDO ದ ಹಿರಿಯ ವಿಜ್ಞಾನಿಗಳು ಮತ್ತು ಸಶಸ್ತ್ರ ಪಡೆಗಳ ಪ್ರತಿನಿಧಿಗಳು ವೀಕ್ಷಿಸಿದರು.

ರಾಜನಾಥ್ ಸಿಂಗ್ ಅಭಿನಂದನೆ

(ಏಜೆನ್ಸೀಸ್)

ಈ ಹಾರಾಟ ಪರೀಕ್ಷೆಗಳಿಗೆ ವೇದಿಕೆಯ ಅಭಿವೃದ್ಧಿಕಾರರಾದ ಡಿಆರ್‌ಡಿಒ ಮತ್ತು ಸಶಸ್ತ್ರ ಪಡೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಭಿನಂದಿಸಿದ್ದಾರೆ. ಯಶಸ್ವಿ ಅಭಿವೃದ್ಧಿಗಾಗಿ ಡಿಆರ್‌ಡಿಒ, ಭಾರತೀಯ ಸಶಸ್ತ್ರ ಪಡೆಗಳು ಮತ್ತು ಉದ್ಯಮವನ್ನು ನಾನು ಅಭಿನಂದಿಸುತ್ತೇನೆ. ಈ ವಿಶಿಷ್ಟ ಹಾರಾಟ ಪರೀಕ್ಷೆಯು ನಮ್ಮ ದೇಶದ ಬಹು ಪದರದ ವಾಯು-ರಕ್ಷಣಾ ಸಾಮರ್ಥ್ಯವನ್ನು ಸ್ಥಾಪಿಸಿದೆ ಮತ್ತು ಶತ್ರುಗಳ ವೈಮಾನಿಕ ಬೆದರಿಕೆಗಳ ವಿರುದ್ಧ ಪ್ರಮುಖ ಸೌಲಭ್ಯಗಳಿಗಾಗಿ ಪ್ರದೇಶದ ರಕ್ಷಣೆಯನ್ನು ಬಲಪಡಿಸಲಿದೆ ಎಂದು ಅವರು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net