ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಜನ್ಮದಿನ ಆಚರಣೆ

RemasterDirector_22abe5b5f
RemasterDirector_22abe5b5f
Published on

ಪಿರಿಯಾಪಟ್ಟಣ: ಶ್ರೀ ಶಿವಕುಮಾರಸ್ವಾಮಿ ಅಭಿಮಾನಿ ಬಳಗದ ನೇತೃತ್ವದಲ್ಲಿ ವಿವಿಧ ವೀರಶೈವ ಸಂಘಟನೆಗಳ ಸಹಕಾರದೊಂದಿಗೆ ತ್ರಿವಿಧ ದಾಸೋಹಿ ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನವನ್ನು ಪಟ್ಟಣದಲ್ಲಿ ಸೋಮವಾರ ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು.


ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು -ಹಂಪಲು ವಿತರಿಸಲಾಯಿತು. ಬಳಿಕ ಬಸವೇಶ್ವರ ವೃತ್ತದ ಬಳಿಯಿರುವ ಡಿ.ದೇವರಾಜ ಅರಸು ಕಲಾಭವನ ಬಳಿ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಪೂಜೆ ಸಲ್ಲಿಸಿದ ಬಳಿಕ ಅನ್ನಸಂತರ್ಪಣೆ ನಡೆಸಲಾಯಿತು.


ರಾವಂದೂರು ಮುರುಘಾ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಾರ್ವಜನಿಕರಿಗೆ ತರಕಾರಿ ಪಲಾವ್, ಮೊಸರನ್ನ, ಜಿಲೇಬಿ, ಮಜ್ಜಿಗೆ ವಿತರಿಸಲಾಯಿತು.
ಮುಖಂಡರಾದ ಚಂದ್ರಶೇಖರ್, ಮುಕೇಶ್ ಕುಮಾರ್, ಆರ್.ಜೆ.ಮಂಜು, ನಿರಂಜನ್, ಮಹೇಶ್, ನಾಗಾನಂದ, ಬಿ.ವಿ.ಅನಿತಾ, ರಾಜಣ್ಣ, ಶಿವಕುಮಾರಸ್ವಾಮಿ, ಮಹದೇವಪ್ಪ, ನವೀನ್ ಕುಮಾರ್, ವಿನಯ್, ಸಂತೋಷ್, ತಾರೇಶ್, ಆನಂದ್, ಶಿವದೇವ್, ಗಿರೀಶ್, ಪರಶಿವಮೂರ್ತಿ ವಿವಿಧ ವೀರಶೈವ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net