ಡಾ.ಕೆ.ಜಿ.ಸುಬ್ರಾಯ ಶರ್ಮಾ ಅವರ 163ನೇ ಕೃತಿ ‘ಮನೋಮರ್ಕಟ ವಿಜಯ’ ಬಿಡುಗಡೆ

Subraya
Published on

ಬೆಂಗಳೂರು: ಧಾರ್ಮಿಕ ಸಾಹಿತ್ಯದ ಪ್ರಸಿದ್ಧ ವಿದ್ವಾಂಸರಾದ ಡಾ.ಕೆ.ಜಿ. ಸುಬ್ರಾಯ ಶರ್ಮಾರವರ 163ನೇ ಕನ್ನಡ ಗ್ರಂಥ ‘ಮನೋಮರ್ಕಟ ವಿಜಯ’ ಇತ್ತೀಚೆಗೆ ಬಿಡುಗಡೆಯಾಯಿತು. ಸಾಕಮ್ಮ ಗಾರ್ಡನ್ಸ್‌ನಲ್ಲಿರುವ ವೇದಾಂತ ನಿಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂ.ಎಸ್. ಕೃಷ್ಣಮೂರ್ತಿಯವರು ಗ್ರಂಥವನ್ನು ಲೋಕಾರ್ಪಣೆ ಮಾಡಿದರು.

ಭಗವದ್ಗೀತೆ, ಗೌಡಪಾದ ಮಾಂಡೂಕ್ಯ ಕಾರಿಕೆ , ಉಪನಿಷತ್ತುಗಳು ಹಾಗೂ ಸುರೇಶ್ವರರ ಕೃತಿಗಳಿಂದ ಆರಿಸಿದ ಸುಮಾರು 40 ವಾಕ್ಯಗಳಿಗೆ ಬರೆದಿರುವ ನಿರೂಪಣೆಯನ್ನು ಈ ಕೃತಿ ಒಳಗೊಂಡಿದೆ. ಗ್ರಂಥ ಪರಿಚಯವನ್ನು ಮಾಡಿದ ಅನಂತಪದ್ಮನಾಭ ಗುಪ್ತ ಅವರು ಕೃತಿಯ ಮಹತ್ವ ಮತ್ತು ಲೇಖರ ವಿದ್ವತ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಲಕ್ಕುಂಡಿ ಶ್ರೀಪಾದ ಭಟ್ಟರು, ಎಚ್.ಎಸ್.ಘಲ್ಗಿ, ಡಾ.ಕೆ.ಜಿ.ಸುಬ್ರಾಯ ಶರ್ಮಾ ಮತ್ತು ರಾಜೇಶ್ವರತಿ ಶರ್ಮಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net