

ಬೆಂಗಳೂರು: ಸಾಹಿತಿ, ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಸ್ಮರಣಾರ್ಥ ಧಾರವಾಡದ ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಷನ್ ವತಿಯಿಂದ ನೀಡಲಾಗುವ ವಾರ್ಷಿಕ ಪ್ರಶಸ್ತಿಗೆ ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು 25 ಸಾವಿರ ರೂ. ನಗದುಒಳಗೊಂಡಿರಲಿದೆ.
2023ರ ಜ. 1ರಿಂದ ಡಿ. 31ರ ಒಳಗೆ ಪ್ರಥಮ ಸಲ ಮುದ್ರಣಗೊಂಡಿರುವ ಕನ್ನಡದ ಉತ್ತಮ ವಿಮರ್ಶಾ ಕೃತಿಗೆ ಪ್ರಶಸ್ತಿ ಲಭಿಸಲಿದೆ. ಒಬ್ಬ ವಿಮರ್ಶಕರ ಒಂದು ಕೃತಿಯನ್ನು ಮಾತ್ರ ಪರಿಗಣಿಸಲಾಗುವುದು. 30ರೊಳಗೆ ವಿವರ ಸಹಿತ ಕೃತಿಯ 4 ಪ್ರತಿಗಳನ್ನು ಕಳುಹಿಸಬೇಕು. ವಿಳಾಸ: ಅಧ್ಯಕ್ಷರು, ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಷನ್, ಮನೋಹರ ಗ್ರಂಥಮಾಲಾ, ಸುಭಾಸ್ ರಸ್ತೆ, ಧಾರವಾಡ- 580 001.