

ತುಮಕೂರು: ಹೂಡಿಕೆದಾರರ ನೆಚ್ಚಿನ ರಾಜ್ಯವಾಗಿರುವ ಕರ್ನಾಟಕವನ್ನು ಸಕಲ ರೀತಿಯಿಂದಲೂ ಅಭಿವೃದ್ಧಿಗೊಳಿಸಲು ಒತ್ತು ನೀಡುತ್ತಿದ್ದು, ಡಬಲ್ ಇಂಜಿನ್ ಸರ್ಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಧಾನಿ ಮೋದಿ ಮಾತನಾಡುತ್ತಾ, ರೈತರ ಅಗತ್ಯತೆಗಳನ್ನು ಪೂರೈಸುವಂತಹ ಯೋಜನೆಗಳು ಜಾರಿಗೆ ತರಲಾಗುತ್ತಿದೆ. ಇದರಿಂದ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಹೆಚ್ಚು ಸಹಾಯಕವಾಗಲಿದೆ ಎಂದರು. ಇದೇ ವೇಳೆ ರಾಜ್ಯದ ಸಿರಿಧಾನ್ಯಗಳ ಬಗ್ಗೆ ಪ್ರಸ್ಯಾಪಿಸಿ, ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆ ಬಹಳಷ್ಟಿದೆ ಎಂದು ಎಂದು ಮೋದಿ ಹೇಳಿದರು.
2023-24ರ ಕೇಂದ್ರ ಬಜೆಟ್ನ್ನು ಪ್ರಸ್ತಾಪಿಸಿ ಮೋದಿ, ಸಶಕ್ತ ಭಾರತ ನಿರ್ಮಾಣದ ಗುರಿಯನ್ನು ಮುಂದಿಟ್ಟುಕೊಂಡು ಈ ಬಾರಿಯ ಬಜೆಟ್ ಮಂಡಿಸಲಾಗಿದೆ. ಹೀಗಾಗಿ ಬಜೆಟ್ ಬಗ್ಗೆ ವಿಶ್ವದೆಲ್ಲೆಡೆ ಚರ್ಚೆಗಳಾಗುತ್ತಿದ್ದು, ಮಧ್ಯಮ ವರ್ಗ ಹಿತ ಕಾಯುವ ಬಜೆಟ್ ಇದಾಗಿದೆ. ರೈತರು, ಮಧ್ಯಮವರ್ಗ, ಕಾರ್ಮಿಕರು, ಯುವಕರು, ಮಹಿಳೆಯರಿಗೆ ಈ ಬಜೆಟ್ ಅನುಕೂಲ ಆಗಲಿದೆ. ಮಹಿಳೆಯರನ್ನು ಸಶಕ್ತೀಕರಣ ಗೊಳಿಸುವ ಯೋಜನೆಯನ್ನು ಮುಂದಿಟ್ಟುಕೊಂಡು ಬಜೆಟ್ ಘೋಷಣೆ ಮಾಡಿದ್ದು, ನಾವು ಅವಶ್ಯಕತೆ, ಆಧಾರ ಮತ್ತು ಆದಾಯವನ್ನ ಗಮನದಲ್ಲಿಟ್ಟುಕೊಂಡಿದ್ದೇವೆ. ಸಮಾಜದ ಎಲ್ಲ ವರ್ಗವನ್ನ ಸಶಕ್ತೀಕರಣ ಗೊಳಿಸುವುದು ಬಜೆಟ್ನ ಗುರಿ ಎಂದರು.