30 ಅಡಿ ಉದ್ದದ 'ದೇವರ ಮೀನು' ಪತ್ತೆ! ಇದು ಅಪಾಯದ ಮುನ್ಸೂಚನೆ ಅನ್ನೋದು ಏಕೆ? ಇಲ್ಲಿದೆ ಅಚ್ಚರಿ ಸಂಗತಿ | Doomsday Fish

ವಿಜಯವಾಣಿ (17)
Published on

Doomsday Fish: ಹಾವಿನಂತೆ ಕಾಣಿಸುವ ಅಪರೂಪದಲ್ಲೇ ಬಲು ಅಪರೂಪದ ದೇವರ ಮೀನು ಇದೀಗ ತಮಿಳುನಾಡಿನ ಮೀನುಗಾರರ ಬಲೆಗೆ ಸಿಕ್ಕಿರುವುದು ಸದ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಅಪರೂಪದಲ್ಲೇ ಅಪರೂಪ

ಸಾಮಾನ್ಯವಾಗಿ ಈ ಮೀನು ಕಾಣಿಸಿಕೊಳ್ಳುವುದು ತುಂಬಾ ವಿರಳ. ಕಾಣಿಸಿಕೊಂಡರೆ ಜಗತ್ತಿಗೆ ಏನೋ ಗಂಡಾಂತರ ಕಾದಿದೆ ಅನ್ನೋ ಮುನ್ಸೂಚನೆಯಂತೆ. ಈ ಕಾರಣಕ್ಕೆ ಇದನ್ನು ಡೂಮ್ಸ್​ಡೇ (ಪ್ರಳಯ ದಿನ) ಮೀನು ಎಂದು ಕರೆಯುತ್ತಾರೆ. ಇದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಸಲಿಗೆ 30 ಅಡಿ ಉದ್ದದ ದೇವರ ಮೀನನ್ನು ಸೆರೆಹಿಡಿದ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದು, ಇದು ಪ್ರಕೃತಿ ವಿಕೋಪದ ಮುನ್ಸೂಚನೆ ಎಂಬ ಮಾತನ್ನು ಇಂದಿಗೂ ಬಲವಾಗಿ ನಂಬಿದ್ದಾರೆ.

ಈ ಮೀನು ಸಿಕ್ಕಿತು ಎಂದರೆ ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿ ಪ್ರಳಯ, ಭೂಕಂಪನ, ಪ್ರವಾಹ ಅಥವಾ ಪ್ರಕೃತಿ ವಿಕೋಪ ಸಂಭವಿಸುತ್ತದೆ ಎಂಬ ಸೂಚನೆ ಎಂದು ಆಳವಾಗಿ ನಂಬಲಾಗಿದೆ. ಸ್ಥಳೀಯರು ಇದನ್ನು ದೇವರು ಮೀನಿನ ರೂಪದಲ್ಲಿ ನಮಗೆ ಎಚ್ಚರಿಸುತ್ತಾನೆ ಎಂದು ಇಂದಿಗೂ ನಂಬಿದ್ದಾರೆ. ಈ ಘಟನೆ ಮೇ.30ರಂದು ನಡೆದಿದ್ದು, ದೃಶ್ಯಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.

ವಿಜ್ಞಾನಿಗಳು ಹೇಳುವುದೇನು?

ಈ ಓರ್ಫಿಶ್ ಉದ್ದವಾದ ಈಲ್ ತರಹದ ದೇಹವನ್ನು ಹೊಂದಿದೆ. ಸಾಮಾನ್ಯವಾಗಿ ಇದು ಸಮುದ್ರದ ಕೆಳಭಾಗದಲ್ಲಿ ವಾಸಿಸುತ್ತದೆ. ಮೇಲ್ಮೈಯಿಂದ ಸುಮಾರು 700 ರಿಂದ 3,280 ಅಡಿ ಕೆಳಗೆ ಜೀವಿಸುತ್ತವೆ. ಆದ್ದರಿಂದ, ಮೇಲ್ಮೈನಲ್ಲಿ ಈ ಜೀವಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಈ ಮೀನುಗಳ ಆರೋಗ್ಯ ಸ್ಥಿತಿ ಹದಗೆಟ್ಟಾಗ ಅಥವಾ ಏನಾದರೂ ಆದಾಗ ಮಾತ್ರ ಹೊರಗಡೆ ಬರುತ್ತವೆ ಹೊರತು, ಇದು ಸನ್ನಿಹಿತವಾಗುತ್ತಿರುವ ವಿಪತ್ತಿನ ಸಂಕೇತವಲ್ಲ. ಇದೊಂದು ಮೂಢನಂಬಿಕೆ ಅಷ್ಟೇ ಎಂದು ಸಂಶೋಧಕರು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net