ಸಿಡುಬು ರೋಗದ ಬಗ್ಗೆ ಆತಂಕ ಪಡದಿರಿ

ಸಿಡುಬು ರೋಗದ ಬಗ್ಗೆ ಆತಂಕ ಪಡದಿರಿ
Published on


ಬೆಟ್ಟದಪುರ: ಬೆಟ್ಟದಪುರ ವ್ಯಾಪ್ತಿಯಲ್ಲಿ ಸಿಡುಬು ರೋಗವಿದೆ ಎಂಬ ವದಂತಿ ಹಬ್ಬಿದ್ದು, ಆ ರೀಯ ಪ್ರಕರಣಗಳು ಕಂಡು ಬಂದಿಲ್ಲ ಸಾರ್ವಜನಿಕರು ಆತಂಕ ಪಡಬಾರದು ಎಂದು ಬೆಟ್ಟದಪುರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೂಜಾ ಹೇಳಿದರು.

ಬೆಟ್ಟದಪುರದ ಪೇಟೆ ಬೀದಿಯಲ್ಲಿ ಆರೋಗ್ಯ ಇಲಾಖೆಯಿಂದ ಮಂಗಳವಾರ ನಡೆದ ಆರೋಗ್ಯ ಅರಿವು ಕಾರ್ಯಕ್ರಮ ವೇಳೆ ಮಾತನಾಡಿ, ಬೆಟ್ಟದಪುರದ ಪೇಟೆ ಬೀದಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಮಕ್ಕಳಿಗೆ ಸಿಡುಬು ರೋಗವಿದೆ ಎಂದು ಸುಳ್ಳು ವದಂತಿ ಹರಡಿದ್ದು, ಈ ಸಂಬಂಧ ಈ ವ್ಯಾಪ್ತಿಯಲ್ಲಿ ಸರ್ವೆ ನಡೆಸಲಾಗಿದ್ದು, ಅಂತಹ ಪ್ರಕರಣಗಳು ಕಂಡು ಬಂದಿಲ್ಲ.

1979ರಲ್ಲೇ ಸಿಡುಬು ರೋಗ ನಿರ್ಮೂಲನೆಯಾಗಿದೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದರು.

ವೈದ್ಯಕೀಯ ಸಿಬ್ಬಂದಿ ಚನ್ನಮ್ಮ, ದೇವಕಿ, ಆಶಾ ಕಾರ್ಯಕರ್ತೆ ಮಣಿ, ಫಾತಿಮಾ, ಸರಸ್ವತಿ, ಶಬನಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net