ಸಿಕ್ಕ ಸಿಕ್ಕ ಹೆಲ್ಪ್‌ಲೈನ್ ಬಳಸಬೇಡಿ

Mumbai man
Published on

ಬೆಂಗಳೂರು: ಕೇದರನಾಥ ಮತ್ತು ಬದ್ರಿನಾಥ ಸ್ಥಳಕ್ಕೆ ಹೋಗಲು ಹೆಲಿಕ್ಯಾಪ್ಟರ್ ಬುಕ್ಕಿಂಗ್ ಮಾಡಲು ಗೂಗಲ್‌ನಲ್ಲಿ ಸಿಕ್ಕ ಲಿಂಕ್ ಸಹಾಯ ಪಡೆದ ವ್ಯಕ್ತಿ, 3.88 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಜಯನಗರದ ಮಲ್ಲಿಕಾರ್ಜುನ್ ಎಂಬುವರು ಕೇದರನಾಥ ಮತ್ತು ಬದ್ರಿನಾಥಕ್ಕೆ ಹೋಗುವ ಉದ್ದೇಶಕ್ಕೆ ಅ.17ರಂದು ಹೆಲಿಕ್ಯಾಪ್ಟರ್ ಬುಕ್ಕಿಂಗ್ ಮಾಡಲು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಹಿಮಾಲಯ ಹಿನ್ ಸರ್ವಿಸ್ ಎಂಬ ವೆಬ್‌ಸೈಟ್ ಸಿಕ್ಕಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ವಾಟ್ಸ್‌ಆ್ಯಪ್ ನಂಬರ್ ಲಭ್ಯವಾಗಿದ್ದು, ಅದರಲ್ಲಿ ಅಪರಿಚಿತ ವ್ಯಕ್ತಿ ಚಾಟಿಂಗ್ ಶುರು ಮಾಡಿದ್ದಾನೆ.

ಹೆಲಿಕ್ಯಾಪ್ಟರ್ ಬುಕ್ ಮಾಡಲು 3.88 ಲಕ್ಷ ರೂ. ವರ್ಗಾವಣೆ ಮಾಡುವಂತೆ ಬ್ಯಾಂಕ್ ಖಾತೆ ವಿವರ ಕೊಟ್ಟಿದ್ದಾನೆ. ಆ ಖಾತೆಗೆ ಮಲ್ಲಿಕಾರ್ಜುನ್ ಹಣ ವರ್ಗಾವಣೆ ಮಾಡಿದ್ದಾರೆ. ಹಣ ಕೈ ಸೇರುತ್ತಿದಂತೆ ಅಪರಿಚಿತ ವ್ಯಕ್ತಿ ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ನೊಂದ ದೂರುದಾರ, ಸೈಬರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net