ಮೀನು ತೊಳೆದ ನೀರನ್ನು ಎಸೆಯಬೇಡಿ... ಈ ರೀತಿ ಬಳಸಿದರೆ ದುಪ್ಪಟ್ಟು ಲಾಭಗಳನ್ನು ಪಡೆಯಬಹುದು! Fish

Fish
Published on

Fish : ಮನೆಯ ಸುತ್ತಲೂ ಸಣ್ಣ ಪ್ರಮಾಣದಲ್ಲಿಯಾದರೂ ಗಿಡಗಳನ್ನು ಬೆಳೆಸುವ ಅನೇಕ ಮಂದಿಯನ್ನು ನಾವು ಕಾಣಬಹುದು. ಫ್ಲಾಟ್‌ಗಳಲ್ಲಿ ವಾಸಿಸುವವರು ಸಹ ತಮ್ಮ ಬಾಲ್ಕನಿಗಳಲ್ಲಿ ಕೆಲವು ತರಕಾರಿಗಳನ್ನು ಬೆಳೆಯುತ್ತಾರೆ. ಇದಕ್ಕಾಗಿ ಅವರಿಗೆ ಗೊಬ್ಬರದ ಅವಶ್ಯಕತೆ ಇರುತ್ತದೆ. ಆದರೆ ನಾವು ಅಡುಗೆಮನೆಯಿಂದ ಎಸೆಯುವ ಅನೇಕ ವಸ್ತುಗಳು ಉತ್ತಮ ಗೊಬ್ಬರಗಳೆಂಬುದು ಅನೇಕರಿಗೆ ತಿಳಿದಿರುವುದಿಲ್ಲ. ಮೀನು ತೊಳೆಯುವ ನೀರು ಕೂಡ ಅವುಗಳಲ್ಲಿ ಒಂದು.

ಮೊಟ್ಟೆಯ ಚಿಪ್ಪು ಮತ್ತು ಗಂಜಿ ನೀರಿನಂತೆ, ಮೀನು ತೊಳೆಯುವ ನೀರನ್ನು ಸಹ ಸಸ್ಯಗಳಿಗೆ ಸುರಿಯುವುದರಿಂದ ಅವುಗಳ ಬೆಳವಣಿಗೆಗೆ ಬಹಳಷ್ಟು ಸಹಾಯ ಮಾಡುತ್ತದೆ.

ಮೀನಿನ ತಲೆ ಮತ್ತು ಇತರ ತ್ಯಾಜ್ಯಗಳು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಮೀನಿನ ತ್ಯಾಜ್ಯವನ್ನು ಸಸ್ಯದ ಕುಂಡ ಅಥವಾ ಬೆಳೆಯುವ ಚೀಲದಲ್ಲಿ ಹೂತುಹಾಕಿ. ಇದಾದ ನಂತರ ಅದರ ಮೇಲೆ ತರಕಾರಿ ಸಸ್ಯಗಳು ಅಥವಾ ಹೂವುಗಳನ್ನು ನೆಡುವುದು ಉತ್ತಮ. ಇದು ಸಸ್ಯವು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ನೆಟ್ಟ ಸಸ್ಯಗಳ ನಡುವೆ ಮೀನನ್ನು ತೊಳೆದ ನೀರನ್ನು ಸುರಿಯಿರಿ. ಬೇರುಗಳನ್ನು ಮುರಿಯದೆ ಸಸ್ಯದ ಬುಡದ ಸುತ್ತ ಸ್ವಲ್ಪ ಮಣ್ಣನು ಅಗೆದು, ನೀರನ್ನು ಸುರಿಯಬೇಕು. ಇದು ಸಸ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಸಸ್ಯಕ್ಕೆ ಯಾವುದೇ ರೋಗ ಬಾರದಂತೆ ತಡೆಯುತ್ತದೆ.

ಮೀನು ತೊಳೆದ ನೀರಿಗೆ ಸ್ವಲ್ಪ ಬೆಲ್ಲ ಸೇರಿಸಿ ಒಂದು ದಿನ ಪಕ್ಕಕ್ಕೆ ಇರಿಸಿ. ಮರುದಿನ, ಇದಕ್ಕೆ ಎರಡು ಪಟ್ಟು ನೀರು ಸೇರಿಸಿ ತರಕಾರಿ ಗಿಡಗಳ ಬುಡದ ಕೆಳಗೆ ಸುರಿಯಿರಿ. ಹೀಗೆ ಮಾಡುವುದರಿಂದ ಸಸ್ಯ ಹಳದಿ ಬಣ್ಣಕ್ಕೆ ತಿರುಗುವುದು, ಬೆಳವಣಿಗೆ ಕುಂಠಿತವಾಗುವುದು ಮತ್ತು ಹಣ್ಣಿನ ಕೊರತೆಯಂತಹ ಸಮಸ್ಯೆಗಳು ಬಗೆಹರಿಯುತ್ತವೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net