ಹೆಚ್ಚುವರಿ ವರದಕ್ಷಿಣೆ ತರುವಂತೆ ಕಿರುಕುಳ: ಆಫ್ರಿಕನ್​ ಗಿಳಿಯಿಂದ ಪತ್ನಿಗೆ ಚಿತ್ರಹಿಂಸೆ ಕೊಟ್ಟ ಗಂಡ! Dowry Harassment

Dowry Harassment

Dowry Harassment : ದಿನದಿಂದ ದಿನಕ್ಕೆ ತಂತ್ರಜ್ಞಾನ ಬೆಳೆಯುತ್ತಿದ್ದು, ಮಹಿಳೆಯರು ಎಲ್ಲ ವಿಚಾರದಲ್ಲೂ ಜಾಗೃತರಾಗುತ್ತಿದ್ದಾರೆ. ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರ ಬಗ್ಗೆ ಪುರುಷರ ಮನೋಭಾವ ಕ್ರಮೇಣ ಬದಲಾಗುತ್ತಿದೆ. ಈ ಹಿಂದೆ, ಅನೇಕ ಮಹಿಳೆಯರು ತಮ್ಮ ಅತ್ತೆ-ಮಾವನ ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಗಂಡ ಮತ್ತು ಆತನ ಕುಟುಂಬದಿಂದ ಉಂಟಾಗುವ ಸಮಸ್ಯೆಗಳಿಂದ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಿವೆ. ವರದಕ್ಷಿಣೆ ಕಿರುಕುಳದಿಂದಾಗಿ ಅನೇಕ ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ.

ಆದರೆ, ಇಂದು ಬದಲಾಗುತ್ತಿರುವ ಕಾಲದೊಂದಿಗೆ ವರದಕ್ಷಿಣೆ ಕಿರುಕುಳದ ಸಮಸ್ಯೆಗಳು ಕೂಡ ಕಡಿಮೆಯಾಗುತ್ತಿವೆ. ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ, ಈ ಸಮಸ್ಯೆ ಮಹಿಳೆಯರನ್ನು ಇಂದಿಗೂ ಕಾಡುತ್ತಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ.

ತಮಿಳುನಾಡಿನ ಪುದುಚೇರಿಯ ವಿಲಿಯನೂರು ಪ್ರದೇಶದ 25 ವರ್ಷದ ಮಹಿಳೆಯೊಬ್ಬರು ಚೆನ್ನೈನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚೆನ್ನೈನ ಅಣ್ಣಾನಗರದ ವ್ಯಕ್ತಿಯನ್ನು ಆಕೆ ಭೇಟಿಯಾದಳು. ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತು. ಬಳಿಕ ಪಾಲಕರನ್ನು ಒಪ್ಪಿಸಿ 2021ರಲ್ಲಿ ಪುದುಚೇರಿಯ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ವಿವಾಹವಾದರು.

ಇದನ್ನೂ ಓದಿ: ನಿಮ್ಮ ಶ್ವಾಸಕೋಶ ಫುಲ್​ ಕ್ಲೀನ್​ ಆಗ್ಬೇಕೆ? ಬಿಸಿನೀರಿನ ಜತೆ ಇದನ್ನು ಮಿಕ್ಸ್​ ಮಾಡಿ ಕುಡಿಯಿರಿ! Lungs Health

ಮದುವೆಯಲ್ಲಿ ಹುಡುಗಿಯ ಪಾಲಕರು ವರನಿಗೆ 150 ಪೌಂಡ್ ಆಭರಣಗಳು, 4 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಡಿಯಾರ, 1.30 ಲಕ್ಷ ರೂ. ಮೌಲ್ಯದ ಸೆಲ್ ಫೋನ್ ಮತ್ತು ವಿವಿಧ ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿದರು. ಆದರೆ, ಮದುವೆಯಾದ ಕೆಲವೇ ವಾರಗಳಲ್ಲಿ, ಆಕೆಯ ಅತ್ತೆ ಆಭರಣಗಳನ್ನು ಕಸಿದುಕೊಂಡರು. ಇದಾದ ಕೆಲವೇ ತಿಂಗಳಲ್ಲಿ, ಆಕೆಯ ಪತಿ ಹೆಚ್ಚುವರಿ ವರದಕ್ಷಿಣೆಯಾಗಿ 50 ಪೌಂಡ್ ಆಭರಣಗಳನ್ನು ತವರು ಮನೆಯಿಂದ ತರುವಂತೆ ಒತ್ತಾಯಿಸಿ ಕಿರುಕುಳ ನೀಡಲು ಪ್ರಾರಂಭಿಸಿದನು.

ಇದಲ್ಲದೆ, ತವರು ಮನೆಯ ಆಸ್ತಿಯನ್ನು ತನ್ನ ಹೆಸರಿಗೆ ನೋಂದಾಯಿಸುವಂತೆ ಕಿರುಕುಳ ನೀಡುತ್ತಿದ್ದನು. ಇದೆಲ್ಲವನ್ನು ಮಹಿಳೆ ನಿರಾಕರಿಸಿದಾಗ, ಆಕೆಯ ಪತಿ ಮನೆಯಲ್ಲಿ ಸಾಕುತ್ತಿದ್ದ ನಿಷೇಧಿತ ಆಫ್ರಿಕನ್ ಕಾಂಗೋ ಗ್ರೇ ಗಿಣಿಯನ್ನು ಹಿಡಿದುಕೊಂಡು ಅದರ ಕೊಕ್ಕಿನಿಂದ ಆಕೆಗೆ ಹಿಂಸೆ ನೀಡಿದ್ದಾನೆ. ಗಂಡನ ಪಾಲಕರು ಮತ್ತು ಸಂಬಂಧಿಕರು ಸಹ ಇದರಲ್ಲಿ ಭಾಗಿಯಾಗಿದ್ದರು.

ದೌರ್ಜನ್ಯ ಮುಂದುವರಿದಂತೆ, ಮಹಿಳೆ ಪುದುಚೇರಿಯಲ್ಲಿರುವ ತನ್ನ ಹೆತ್ತವರ ಮನೆಗೆ ಮರಳಿದ್ದಾಳೆ. ಇದೀಗ ವಿಲಿಯನೂರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಪತಿ, ಆತನ ಪಾಲಕರು ಮತ್ತು ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್​)

12 ವರ್ಷದ ಬಳಿಕ ರಣಜಿ ಅಖಾಡಕ್ಕೆ​! ಕಿಂಗ್ ಕೊಹ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಫ್ಯಾನ್ಸ್ ಖುಷ್​, ಡೆಲ್ಲಿ ಬಾಯ್ಸ್ ರೆಡಿ | Virat Kohli

ನಿಮ್ಮ ಹೆಸರು ಬಿ ಅಕ್ಷರದಿಂದ ಶುರುವಾಗುತ್ತಾ? ಹಾಗಾದರೆ ನಿಮ್ಮಲ್ಲಿ ಖಂಡಿತ ಈ ಗುಣಗಳಿವೆ! Name

Share This Article

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…