ನಿಮ್ಮ ಶ್ವಾಸಕೋಶ ಫುಲ್​ ಕ್ಲೀನ್​ ಆಗ್ಬೇಕೆ? ಬಿಸಿನೀರಿನ ಜತೆ ಇದನ್ನು ಮಿಕ್ಸ್​ ಮಾಡಿ ಕುಡಿಯಿರಿ! Lungs Health

Lungs Health
Published on

Lungs Health : ದೀರ್ಘಕಾಲ ಆರೋಗ್ಯವಾಗಿರಲು ನಮ್ಮ ದೇಹದ ಪ್ರತಿಯೊಂದು ಅಂಗವೂ, ವಿಶೇಷವಾಗಿ ಶ್ವಾಸಕೋಶ ಮತ್ತು ಹೃದಯವು ಚೆನ್ನಾಗಿ ಕೆಲಸ ಮಾಡಬೇಕು. ದೇಹದ ಯಾವುದೇ ಅಂಗಗಳ ಕಾರ್ಯದಲ್ಲಿ ಕೊಂಚ ಏರುಪೇರಾದರೆ ಅನಾರೋಗ್ಯ ಕಾಡುತ್ತದೆ. ನಾವು ಗಾಳಿಯನ್ನು ಉಸಿರಾಡುವಾಗ ಆಮ್ಲಜನಕವನ್ನು ಶೋಧಿಸಿ ದೇಹಕ್ಕೆ ಕಳುಹಿಸಲು ಶ್ವಾಸಕೋಶಗಳು ನೆರವಾಗುತ್ತವೆ. ಆಮ್ಲಜನಕವು ದೇಹದಾದ್ಯಂತ ರಕ್ತದ ಹರಿವಿಗೆ ಸಹಾಯ ಮಾಡುತ್ತದೆ ಮತ್ತು ದೇಹದ ಎಲ್ಲಾ ಭಾಗಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ತಲುಪಿಸಲು ಸಹಾಯ ಮಾಡುತ್ತದೆ.

ಇದಿಷ್ಟೇ ಅಲ್ಲದೆ, ಶ್ವಾಸಕೋಶಗಳು ನಮ್ಮ ದೇಹದಿಂದ ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಹಾಕುತ್ತವೆ. ಈ ಕಾರ್ಯಗಳು ದೇಹದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಶ್ವಾಸಕೋಶಗಳಲ್ಲಿ ವಿಷಕಾರಿ ವಸ್ತುಗಳು ಸಂಗ್ರಹವಾದರೆ, ಅದು ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು. ಹೀಗಾಗಿ ಶ್ವಾಸಕೋಶವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಏನು ಮಾಡಬೇಕೆಂದು ನಾವೀಗ ತಿಳಿಯೋಣ.

ನಾವು ಗಾಳಿಯನ್ನು ಉಸಿರಾಡುವಾಗ, ನಮ್ಮ ಶ್ವಾಸಕೋಶಗಳು ಬ್ಯಾಕ್ಟೀರಿಯಾ ಮತ್ತು ಇತರ ಮಾಲಿನ್ಯಕಾರಕ ಅಂಶಗಳಿಂದ ನಮ್ಮ ದೇಹವನ್ನು ಶುದ್ಧೀಕರಿಸುತ್ತದೆ. ಈ ಮೂಲಕ ನಮ್ಮ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಹೀಗಾಗಿ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಶ್ವಾಸಕೋಶದಲ್ಲಿ ಕೊಳಕು ಸಂಗ್ರಹವಾಗುವುದರಿಂದ ಆಸ್ತಮಾ ಮತ್ತು ಸೋಂಕುಗಳ ಅಪಾಯ ಹೆಚ್ಚಾಗುತ್ತದೆ. ಸಾಮಾನ್ಯವಾಗಿ, ಹವಾಮಾನ ಬದಲಾದಾಗ, ಮೊದಲು ಪರಿಣಾಮ ಬೀರುವುದು ಶ್ವಾಸಕೋಶಗಳ ಮೇಲೆ.

ಹಲವು ಕಾರಣಗಳಿಂದ ಶ್ವಾಸಕೋಶಗಳು ದುರ್ಬಲಗೊಂಡು ಕ್ರಮೇಣ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸುತ್ತವೆ. ಧೂಮಪಾನದ ಅಭ್ಯಾಸ, ಮಾಲಿನ್ಯ, ಹೊಗೆ ಮತ್ತು ಕಳಪೆ ಜೀವನಶೈಲಿಯಿಂದಾಗಿ, ಜನರ ಶ್ವಾಸಕೋಶಗಳು ವೇಗವಾಗಿ ಕ್ಷೀಣಿಸಲು ಪ್ರಾರಂಭಿಸುತ್ತವೆ. ಅದೇ ರೀತಿ, ಶ್ವಾಸಕೋಶದಲ್ಲಿ ಕೊಳಕು ಸಂಗ್ರಹವಾಗುವುದರಿಂದ ಶ್ವಾಸಕೋಶಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ತಡೆಯುತ್ತದೆ. ಇದು ಉಸಿರಾಟದ ತೊಂದರೆಗಳು ಮತ್ತು ರೋಗಗಳಿಗೆ ಕಾರಣವಾಗಬಹುದು. ಇದನ್ನು ಮನೆಮದ್ದುಗಳಿಂದ ಸ್ವಚ್ಛಗೊಳಿಸಬಹುದು.

ಬಿಸಿನೀರಿನೊಂದಿಗೆ ಜೇನುತುಪ್ಪ ಬೆರೆಸಿ ಕುಡಿಯಿರಿ

ಜೇನು ತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಇದನ್ನು ಆಯುರ್ವೇದ ಔಷಧವೆಂದು ಗುರುತಿಸಲಾಗಿದೆ. ಅದೇ ರೀತಿ, ಜೇನುತುಪ್ಪದಲ್ಲಿ ಉತ್ಕರ್ಷಣ ನಿರೋಧಕಗಳಿದ್ದು, ನಿಮ್ಮ ದೇಹ ಮತ್ತು ಶ್ವಾಸಕೋಶಗಳನ್ನು ಶುದ್ಧೀಕರಿಸುತ್ತದೆ ಹಾಗೂ ದೇಹದಲ್ಲಿ ವಿಷವನ್ನು ಸಂಗ್ರಹಿಸಲು ಬಿಡುವುದಿಲ್ಲ.

ಜೇನುತುಪ್ಪವು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮ ಶ್ವಾಸಕೋಶ ಆರೋಗ್ಯಕರವಾಗಿರುತ್ತದೆ. ಶ್ವಾಸಕೋಶವನ್ನು ಶುದ್ಧೀಕರಿಸಲು ನೀವು ನೀರಿನೊಂದಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯಬಹುದು. ಒಂದು ಕಪ್ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ. ನೀರು ತುಂಬಾ ಬಿಸಿಯಾಗಿರಬಾರದು. ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿದರೆ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net