ಅಸ್ವಸ್ಥ ಶಿಶುಗಳಿಗಾಗಿ 300 ಲೀಟರ್ 'ಎದೆ ಹಾಲು' ದಾನ;'ಏಷ್ಯಾ ಬುಕ್ ಆಫ್ ರೆಕಾರ್ಡ್ಸ್' ಸಾಧನೆ ಮಾಡಿದ ಮಹಾನ್ ತಾಯಿ| breast-milk

mother milk
Published on

ತಮಿಳುನಾಡು: ತಿರುಚಿರಾಪಳ್ಳಿ ಜಿಲ್ಲೆಯ ಕಟ್ಟೂರಿನ 33 ವರ್ಷದ ಗೃಹಿಣಿಯೊಬ್ಬರು 300 ಲೀಟರ್‌ಗೂ ಹೆಚ್ಚು ಎದೆ ಹಾಲು ದಾನ ಮಾಡಿದ್ದು, ಸಾವಿರಾರು ಅಕಾಲಿಕ ಮತ್ತು ತೀವ್ರ ಅಸ್ವಸ್ಥ ಶಿಶುಗಳ ಜೀವ ಉಳಿಸಲು ಸಹಾಯ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಮಕ್ಕಳ ತಾಯಿಯಾದ ಸೆಲ್ವಾ ಬೃಂದಾ, ಏಪ್ರಿಲ್ 2023 ರಿಂದ ಫೆಬ್ರವರಿ 2025 ರವರೆಗೆ 22 ತಿಂಗಳುಗಳಲ್ಲಿ ಒಟ್ಟು 300.17 ಲೀಟರ್ ಹಾಲನ್ನು ಮಹಾತ್ಮಾ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆ ಹಾಲಿನ ಬ್ಯಾಂಕ್‌ಗೆ ದಾನ ಮಾಡಿದ್ದಾರೆ .

(ಏಜೆನ್ಸೀಸ್)

2023-24ರ ಅವಧಿಯಲ್ಲಿ ಹಾಲಿನ ಬ್ಯಾಂಕ್ ಸಂಗ್ರಹಿಸಿದ ಒಟ್ಟು ಎದೆ ಹಾಲಿನಲ್ಲಿ ಅವರ ಕೊಡುಗೆ ಅರ್ಧದಷ್ಟು ಇದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಕಾರೇತರ ಸಂಸ್ಥೆಯೊಂದು ನೀಡಿದ ಪ್ರೋತ್ಸಾಹದಿಂದ, ಬೃಂದಾ ಅವರ ನಿರಂತರ ಸೇವೆಯು 'ಏಷ್ಯಾ ಬುಕ್ ಆಫ್ ರೆಕಾರ್ಡ್ಸ್' ಮತ್ತು 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ಎರಡರಲ್ಲೂ ಸ್ಥಾನ ಗಳಿಸಿದೆ. ಅವರ ಗಮನಾರ್ಹ ಕೊಡುಗೆಯನ್ನು ಗುರುತಿಸಿ, ಆಸ್ಪತ್ರೆಯ ಅಧಿಕಾರಿಗಳು ನಾಳೆ(ಆ.7) ರಂದು ನಡೆಯಲಿರುವ 'ವಿಶ್ವ ಸ್ತನ್ಯಪಾನ ಸಪ್ತಾಹ'ದ ಸಮಾರೋಪ ಸಮಾರಂಭದಲ್ಲಿ ಅವರನ್ನು ಸನ್ಮಾನ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net