

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನ ಗೆಳತಿಗೂ ಕರೊನಾ ಸೋಂಕು ದೃಢಪಟ್ಟಿದೆ ಎಂದು ಅಮೆರಿಕಾ ಮಾಧ್ಯಮ ಶುಕ್ರವಾರ ವರದಿ ಮಾಡಿದೆ.
ಟ್ರಂಪ್ರ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಜತೆ ಡೇಟಿಂಗ್ ಮಾಡುತ್ತಿರುವ 51 ವರ್ಷದ ಕಿಂಬರ್ಲಿ ಗಿಲ್ಫಾಯ್ಗೆ ಕರೊನಾ ಸೋಂಕು ತಗುಲಿದೆ ಎಂದು ಯುಎಸ್ ಮಾಧ್ಯಮ ಶುಕ್ರವಾರ ವರದಿ ಮಾಡಿದೆ. ಇದನ್ನೂ ಓದಿರಿ ಕರೊನಾಗೂ ಬಂತು ಚಿನ್ನದ ಮಾಸ್ಕ್!
ಅಮೆರಿಕಾ ಅಧ್ಯಕ್ಷರ ಭಾಷಣ ಮತ್ತು ಮೌಂಟ್ ರಶ್ಮೋರ್ನ್‌ನಲ್ಲಿ ಸಂಭ್ರಮಾಚರಣೆ ನೋಡಲು ದಕ್ಷಿಣ ಡಕೋಟಾಗೆ ಕಿಂಬರ್ಲಿ ಗಿಲ್ಫಾಯ್ ಪ್ರಯಾಣಿಸಿದ್ದರು. ಆಕೆಗೆ ಯಾವುದೇ ರೋಗ ಲಕ್ಷಣಗಳಿರಲಿಲ್ಲ, ಪರೀಕ್ಷೆ ನಡೆಸಿದ ಸಮಯದಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಟ್ರಂಪ್ ಅಭಿಯಾನದ ಹಣಕಾಸು ಸಮಿತಿ ಮುಖ್ಯಸ್ಥ ಸೆರ್ಗಿಯೋ ಗೋರ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಜೂನಿಯರ್ ಅವರನ್ನೂ ಪರೀಕ್ಷಿಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಮುನ್ನೆಚ್ಚರಿಕೆಯಾಗಿ ಮುಂಬರುವ ಎಲ್ಲ ಸಮಾರಂಭಗಳಲ್ಲಿ ಭಾಗಿಯಾಗುವುದನ್ನು ರದ್ದುಗೊಳಿಸಲಾಗಿದೆ. ಯುಎಸ್ ಅಧ್ಯಕ್ಷರಿಗೆ ಹತ್ತಿರವಿರುವ ಮೂರನೇ ವ್ಯಕ್ತಿ ಗಿಲ್ಫಾಯ್ಲ್ ಎಂದು ಯುಎಸ್ ಮಾಧ್ಯಮ ವರದಿ ಮಾಡಿದೆ. ಇದುವರೆಗೂ ಅಮೆರಿಕಾದಲ್ಲಿ ಕೋವಿಡ್ಗೆ ಸುಮಾರು 1,30,000 ಮಂದಿ ಮೃತಪಟ್ಟಿದ್ದಾರೆ.