

ಪುಣೆ: ಕರೊನಾ ಸೋಂಕು ಎಲ್ಲೆಡೆ ಸದ್ದು ಮಾಡುತ್ತಿದ್ದಂತೆ ಮುಖಗವಸು(ಮಾಸ್ಕ್)ಗಳಿಗೆ ಭಾರೀ ಡಿಮಾಂಡ್ ಬಂದಿದೆ. ತರಹೇವಾರಿಯ ಮಾಸ್ಕ್ಗಳು ಮಾರುಕಟ್ಟೆಗೀಗ ಲಗ್ಗೆಯಿಟ್ಟಿವೆ. 'ಮೋದಿ ಮಾಸ್ಕ್' ಕೂಡ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿದೆ. ಕೆಲವರಂತೂ ಮಸ್ಕ್ಗಳಿಗೆ 'ಕರೊನಾ ಮಾಸ್ಕ್' ಎಂದೇ ಕರೆಯುತ್ತಿದ್ದಾರೆ.
ಉಳ್ಳವರು ಆರ್ಥಿಕ ಸ್ಥಿತಿಗನುಗುಣವಾಗಿ ಮಾಸ್ಕ್ ಖರೀದಿಸಿ ಧರಿಸುತ್ತಿದ್ದಾರೆ. ಇನ್ನೂ ಕೆಲವರು ದುಪ್ಪಟ್ಟ, ಶಿರೋವಸ್ತ್ರಗಳನ್ನೇ ಮುಖಗವಸನ್ನಾಗಿ ಬಳಸುತ್ತಿದ್ದಾರೆ. ಈ ನಡುವೆ ಇಲ್ಲೊಬ್ಬ ಚಿನ್ನದ ಮಾಸ್ಕ್ ಮಾಡಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಇದನ್ನೂ ಓದಿರಿ ಈ ಮದುವೆಗೆ ಹೋಗಿದ್ದ 20ಕ್ಕೂ ಹೆಚ್ಚು ಜನರಿಗೆ ಕರೊನಾ ಪಾಸಿಟಿವ್!
ಅಂದಹಾಗೆ ಚಿನ್ನದ ಮಾಸ್ಕ್ ಹಾಕಿಕೊಳ್ಳುತ್ತಿರೋದು ಯಾರು ಗೊತ್ತಾ? ಪುಣೆಯ ಪಿಂಪ್ರಿ ಚಿಂಚವಾಡದ ಶಂಕರ್ ಕೂರದೆ ಎಂಬಾತ. ದೇಶದೆಲ್ಲೆಡೆ ಕೋವಿಡ್ ಸೋಂಕು ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ಧರಿಸಲೆಂದೇ ಶಂಕರ್ ಚಿನ್ನದ ಮುಖಗವಸು ಮಾಡಿಸಿಕೊಡಿದ್ದಾರೆ. ಈ ಚಿನ್ನದ ಮಾಸ್ಕ್ಗೆ ಬರೋಬ್ಬರಿ 2.89 ಲಕ್ಷ ರೂ. ಖರ್ಚು ಮಾಡಿದ್ದಾರೆ.
ಮಾಸ್ಕ್ ತೆಳುವಾಗಿದ್ದು, ಸಣ್ಣಸಣ್ಣ ರಂಧ್ರಗಳಿವೆ. ಉಸಿರಾಟಕ್ಕೆ ತೊಂದರೆ ಆಗದಂತೆ ಈ ರಂಧ್ರಗಳನ್ನು ಬಿಡಲಾಗಿದೆ. ಆದರೆ, ಸೋಂಕು ತಗುಲದಂತೆ ರಕ್ಷಿಸಿಕೊಳ್ಳುವಲ್ಲಿ ಈ ಮಾಸ್ಕ್ ಎಷ್ಟರಮಟ್ಟಿಗೆ ಸಫಲ ಎಂಬುದು ತಿಳಿದಿಲ್ಲ.