ಶೇ. 1.4ರಷ್ಟು ಇಳಿಕೆಯಾದ ದೇಶೀ ಕಾರುಗಳ ಮಾರಾಟ

ವಿಜಯವಾಣಿ (5)
Published on

ಮುಂಬೈ: ಈ ಹಣಕಾಸು ವರ್ಷದ ಮೊದಲ ತ್ರೖೆಮಾಸಿಕದಲ್ಲಿ ದೇಶೀಯ ಪ್ರಯಾಣಿಕ ವಾಹನ ಮಾರಾಟ 10,11,882 ಯೂನಿಟ್​ಗಳಿಗೆ ಇಳಿಕೆಯಾಗಿದೆ.

ಕಳೆದ ವರ್ಷದ ಇದೇ ತ್ರೖೆಮಾಸಿಕದಲ್ಲಿನ 10,26,006 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡ 1.4ರಷ್ಟು ಕಡಿಮೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನು ಫ್ಯಾಕ್ಚರರ್ಸ್ (ಎಸ್​ಐಎಎಂ) ಮಂಗಳವಾರ ತಿಳಿಸಿದೆ. ಒಟ್ಟು ದ್ವಿಚಕ್ರವಾಹನ ಮಾರಾಟ 46,74,562 ಯೂನಿಟ್​ಗಳಿಗೆ ಇಳಿಕೆಯಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 49,85,631 ಯೂನಿಟ್ ಮಾರಾಟವಾಗಿದ್ದವು. ಅದಕ್ಕೆ ಹೋಲಿಸಿದರೆ ಶೇ. 6.2ರಷ್ಟು ಕಡಿಮೆಯಾಗಿದೆ. ವಾಣಿಜ್ಯ ವಾಹನ ಮಾರಾಟ 2,23,215 ಯೂನಿಟ್​ಗಳಿಗೆ ಇಳಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2,24,575 ಯೂನಿಟ್ ಮಾರಾಟವಾಗಿದ್ದವು. ಶೇ. 0.6ರಷ್ಟು ಕಡಿಮೆಯಾಗಿದೆ ಎಂದು ಎಸ್​ಐಎಎಂ ಮಹಾನಿರ್ದೇಶಕ ರಾಜೇಶ್ ಮೆನನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net