

ನಾಸಿಕ್: ದಾಳಿ ಮಾಡಲು ಹೊಂಚು ಹಾಕುತ್ತ ಕಾದು ಕುಳಿತಿದ್ದ ಚಿರತೆಯೊಂದನ್ನು ಎರಡು ನಾಯಿಗಳು ಧೈರ್ಯವಾಗಿ ಹಿಮ್ಮೆಟ್ಟಿಸಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಅಡ್ಗಾಂವ್ ಶಿವಾರ್ ಪ್ರದೇಶದಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಚಿರತೆಯನ್ನು ಎರಡು ನಾಯಿಗಳು ಹಿಮ್ಮೆಟ್ಟಿಸುತ್ತಿರುವುದು ಕಂಡು ಬರುತ್ತದೆ. ಈ ದೃಶ್ಯವು ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವೈರಲ್ ಆಘಿರುವ ವಿಡಿಯೋದಲ್ಲಿ ಮನೆಯ ಕಾಂಪೌಂಡ್ನಲ್ಲಿ ಎರಡು ನಾಯಿಗಳು ಮಲಗಿದ್ದು ನಿಧಾನವಾಗಿ ಚಿರತೆ ಬಂದು ಅದನ್ಉ ಕೊಂದು ತಿನ್ನಲು ಯತ್ನಿಸುತ್ತದೆ. ಈ ವೇಳೆ ಅಲ್ಲೇ ಮಲಗಿದ್ದ ಮತ್ತೊಂದು ನಾಯಿ ಇದನ್ನು ಗಮನಿಸಿ ಕೂಡಲೇ ಬೊಗಳಲು ಶುರು ಮಾಡುತ್ತದೆ. ಇದರಿಂದ ಗಾಬರಿಗೊಳ್ಳುವ ಚಿರತೆ ತನ್ನ ಬೇಟೆಯನ್ನು ಬಿಟ್ಟು ಓಡಲು ಶುರು ಮಾಡುತ್ತದೆ.
ಇದಾದ ಕೆಲ ಕ್ಷಣದ ಬಳಿಕ ಮತ್ತೊಮ್ಮೆ ಹೊಂಚು ಹಾಕಿ ವಾಪಸ್ ಬರುವ ಚಿರತೆಯನ್ನು ಹೆದರದ ರ್ಶವಾನಗಳು ಅದನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಘಟನೆಯ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯಾಧಿಕಾರಿ ವಿರ್ಶರಾಲಿ ಗಾಡೆ ಕಳೆದ ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈಗಅಗಲೇ ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಆರಂಭಿಸಿದ್ದೇವೆ. ಶೀಘ್ರದಲ್ಲೇ ಅದನ್ನು ಹಿಡಿದು ಕಾಡಿಗೆ ವಾಪಸ್ ಬಿಡಲಾಗುವುದು ಎಂದು ತಿಳಿಸಿದ್ದಾರೆ.