ನಾಯಿಗಳು ಅತ್ಯಂತ ಸೌಮ್ಯ ಪ್ರಾಣಿಗಳು, ಕ್ರೌರ್ಯಕ್ಕೆ ಅರ್ಹವಲ್ಲ: ಸುಪ್ರೀಂ ಆದೇಶಕ್ಕೆ ಪ್ರಿಯಾಂಕಾ ಪ್ರತಿಕ್ರಿಯೆ|Priyanka Gandhi

Supreme court
Published on

Priyanka Gandhi: ದೆಹಲಿ ಎನ್‌ಸಿಆರ್‌ನಲ್ಲಿರುವ ಎಲ್ಲಾ ಬೀದಿ ನಾಯಿಗಳನ್ನು 8 ವಾರಗಳ ಒಳಗೆ ಆಶ್ರಯ ತಾಣಗಳಿಗೆ ಕಳುಹಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಈ ಕೆಲಸವು ನಾಯಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಸಂಸದೆ ಪ್ರಿಯಾಂಕಾ, ನಗರದ ಎಲ್ಲಾ ಬೀದಿ ನಾಯಿಗಳನ್ನು ಕೆಲವೇ ವಾರಗಳಲ್ಲಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವುದರಿಂದ ಅವುಗಳ ಮೇಲೆ ಅಮಾನವೀಯ ವರ್ತನೆ ತೋರಿದಂತಾಗುತ್ತದೆ. ನಾಯಿಗಳನ್ನು ತೆಗೆದುಕೊಳ್ಳಲು ಸಾಕಷ್ಟು ಆಶ್ರಯ ತಾಣಗಳು ಅಸ್ತಿತ್ವದಲ್ಲಿಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೆ, ನಗರ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ಕ್ರೌರ್ಯಕ್ಕೆ ಸಮವಾಗಿರುತ್ತದೆ. ಪರಿಸ್ಥಿತಿಯನ್ನು ನಿರ್ವಹಿಸಲು ಖಂಡಿತವಾಗಿಯೂ ಉತ್ತಮ ಮಾರ್ಗವಿದೆ ಮತ್ತು ಈ ಮುಗ್ಧ ಪ್ರಾಣಿಗಳನ್ನು ನೋಡಿಕೊಳ್ಳುವ ಮತ್ತು ಸುರಕ್ಷಿತವಾಗಿಡುವ ಮಾನವೀಯ ಮಾರ್ಗವನ್ನು ಹುಡುಕಬೇಕು ಎಂದು ಪ್ರಿಯಾಂಕಾ ಹೇಳಿದ್ದಾರೆ.

ನಾಯಿಗಳ ಮೇಲಿನ ಈ ರೀತಿಯ ಕ್ರೌರ್ಯವು ಅರ್ಹವಲ್ಲ. ಅವುಗಳು ಸುಂದರ ಜೀವಿಗಳು. ಅಲ್ಲದೆ, ನಾಯಿಗಳು ಅತ್ಯಂತ ಸುಂದರವಾದ, ಸೌಮ್ಯ ಜೀವಿಗಳು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಬರೆದಿದ್ದಾರೆ.

ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ನಲ್ಲಿರುವ ಎಲ್ಲಾ ಬೀದಿ ನಾಯಿಗಳನ್ನು ಎಂಟು ವಾರಗಳ ಒಳಗೆ ಬಂಧಿಸಿ ಮೀಸಲಾದ ನಾಯಿ ಆಶ್ರಯಗಳಲ್ಲಿ ಇರಿಸಬೇಕೆಂದು ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದೆ. ಸೆರೆಹಿಡಿಯಲಾದ ಯಾವುದೇ ಪ್ರಾಣಿಯನ್ನು ಮತ್ತೆ ಬೀದಿಗಳಿಗೆ ಬಿಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಬೀದಿ ನಾಯಿಗಳ ದಾಳಿಯು ಆತಂಕಕಾರಿ ಮತ್ತು ಗೊಂದಲ ಹೆಚ್ಚಳದ ಕುರಿತು ಸ್ವತಃ ಸಲ್ಲಿಸಲಾದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು, ಅಧಿಕಾರಿಗಳು ಸೆರೆಹಿಡಿಯುವ ಕಾರ್ಯಾಚರಣೆಯನ್ನು ನಡೆಸದಂತೆ ತಡೆಯಲು ಪ್ರಯತ್ನಿಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲು ಆದೇಶಿಸಿತು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net