ವಿಡಿಯೋ ಗೇಮ್ ಆಡುತ್ತಿರುವ ಶ್ವಾನ; ಕಂಪ್ಯೂಟರ್ ಆಫ್ ಆದಾಗ ನಾಯಿ ಮಾಡಿದ್ದೇನು?

Dog throws tantrum after human switches off computer
Published on

ನವದೆಹಲಿ: ಫೋನ್, ಕಂಪ್ಯೂಟರ್​​, ಟಿವಿಯಲ್ಲಿ ಸೀರಿಯಸ್ಸಾಗಿ ನೋಡುತ್ತಿರುವಾಗ ಅಥವಾ ಯಾವುದೇ ಆಟ ಆಡುವಾಗ ಯಾರಾದರೂ ಅಡ್ಡಿಪಡಿಸಿದರೆ ನಮಗೆ ಕಿರಿಕಿರಿಯಾಗುತ್ತದೆ. ತಕ್ಷಣವೇ ಯಾರು ನಮಗೆ ತೊಂದರೆ ನೋಡುತ್ತಾರೆ ಅವರ ಮೇಲೆ ಮುನಿಸಿಕೊಳ್ಳುತ್ತೇವೆ. ಹೀಗೆ ಮನುಷ್ಯರಂತೆ ನಾಯಿಯೂ ಕೂಡಾ ಸಿಟ್ಟಿನಿಂದ ಪ್ರತಿಕ್ರಿಯೆ ನೀಡಿರುವ ವಿಡಿಯೋ ವೈರಲ್​ ಆಗಿದೆ.

ನಾಯಿಗಳು ತುಂಬಾ ಬುದ್ಧಿವಂತ ಪ್ರಾಣಿಗಳಾಗಿವೆ. ಮನುಷ್ಯರನ್ನು ತುಂಬಾ ನಂಬುತ್ತದೆ. ಅಷ್ಟೇ ಅಲ್ಲ ಕೆಲವೊಮ್ಮೆ ಮನುಷ್ಯರಂತೆ ಭಾವನೆಗಳನ್ನು ತೋರಿಸುತ್ತದೆ.

ವಿಡಿಯೋದಲ್ಲಿ ಏನಿದೆ?: ನಾಯಿಯೊಂದು ಕೀಬೋರ್ಡ್ ಬಳಸಿ ಗಂಭೀರವಾಗಿ ವಿಡಿಯೋ ಗೇಮ್ ಆಡುತ್ತಿದೆ. ಅದರ ಮಾಲೀಕರು ಕಂಪ್ಯೂಟರ್ ಅನ್ನು ಆಫ್ ಮಾಡಿದರು. ಕೋಪಗೊಂಡ ಶ್ವಾನ ಕೀ ಬೋರ್ಡ್​​​ನ್ನು ಸಿಟ್ಟಿನಿಂದ ತಳ್ಳಿದೆ. ಅದರ ಮುಖದಲ್ಲಿ ತುಂಬ ಕೋಪ ಮತ್ತು ಹತಾಶೆ ಎದ್ದು ಕಾಣುತ್ತಿತ್ತು.

ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ನಾಯಿಗೆ ತುಂಬಾ ಕೋಪ ಬಂದಂತಿದೆ' 'ಯಾಕೆ ಡಿಸ್ಟರ್ಬ್ ಮಾಡ್ತೀರಾ?' ಎಂದು ಹೀಗೆ ತಮಾಷೆಯ ಎಮೋಜಿಗಳೊಂದಿಗೆ ಕಾಮೆಂಟ್ಗಳನ್ನು ಪೋಸ್ಟ್ ಮಾಡಿದ್ದಾರೆ. ಅದೇನೇ ಇರಲಿ, ಪ್ರಾಣಿಗಳಿಗೂ ಕೂಡಾ ಭಾವನೆ ಇರುತ್ತದೆ ಎನ್ನುವ ಈ ಶ್ವಾನದ ವಿಡಿಯೋ ನೆಟ್ಟಿಗರ ಮನ ಕದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net