ಒಂದು ಹುಚ್ಚು ನಾಯಿ ಹಲವು ಗ್ರಾಮಗಳಲ್ಲಿ ದಾಳಿ! ಶ್ವಾನ ಕಡಿತಕ್ಕೆ ಅನೇಕರಿಗೆ ಗಂಭೀರ ಗಾಯ | Dog Bite

dog bite
Published on

ಕೋಲಾರ: ಜಿಲ್ಲೆಯಲ್ಲಿ ಹುಚ್ಚು ನಾಯಿಯ (Dog Bite) ಅಟ್ಟಹಾಸ ಜೋರಾಗಿದ್ದು, 10ಕ್ಕೂ ಜನರಿಗೆ ಕಚ್ಚಿ, ಗಾಯಗೊಳಿಸಿದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಸಿಕ್ಕ ಸಿಕ್ಕವರ ಮೇಲೆ ಹುಚ್ವು ನಾಯಿ ದಾಳಿ ನಡೆಸಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ರೋಣೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಹುಚ್ಚು ನಾಯಿ ದಾಳಿ ಮಾಡಿದೆ. ಒಂದು ಹುಚ್ವು ಶ್ವಾನ ಹಲವು ಗ್ರಾಮಗಳ ಜನರಿಗೆ ಕಚ್ಚಿ, ಗಾಯಗೊಳಿಸಿರುವುದು ಇದೀಗ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಚಿಕ್ಕ ತಿಮ್ಮನಹಳ್ಳಿ, ರೆಡ್ಡಂಪಲ್ಲಿ, ಕೋಟಪಲ್ಲಿ, ರೋಜೇರಪಲ್ಲಿ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ನಾಯಿ ದಾಳಿಗೆ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಿಕ್ಕತಿಮ್ಮನಹಳ್ಳಿ ದಮ್ಮರೆಡ್ಡಿ, ರೋಜರಪಲ್ಲಿ ತಿಪ್ಪಮ್ಮ (80), ರೆಡ್ಡಂಪಲ್ಲಿ ಗೀತಮ್ಮ(50), ಕೋಟಪಲ್ಲಿ ಮುನಿಯಪ್ಪಗೆ ಗಾಯವಾಗಿದೆ. ಇವರೆಲ್ಲ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಒಟ್ಟು ಆರು ಜನ ಗಾಯಾಳುಗಳಿಗೆ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net