

ಬೆಟ್ಟದಪುರ: ಬೆಟ್ಟದಪುರ ಸಮೀಪದ ಭುವನಹಳ್ಳಿ ಗ್ರಾಮದ ಸರ್ವೆ ನಂಬರ್ 89ರ 10 ಎಕರೆ ಜಾಗದಲ್ಲಿರುವ ದೊಡ್ಡ ಕೆರೆ ಸೋಮವಾರ ಬೆಳಗ್ಗೆ ಒಡೆದು ಅಪಾರ ಪ್ರಮಾಣದ ನೀರು ಹರಿದಿದೆ.
ನೀರು ಹರಿದ ಪರಿಣಾಮ ಸುತ್ತಮುತ್ತಲ ಐದಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಜೋಳ, ಅಡಕೆ, ತೆಂಗು, ಶುಂಠಿ ಜಲಾವೃತವಾಗಿವೆ.
ತಹಸೀಲ್ದಾರ್ ನಿಸರ್ಗ ಪ್ರಿಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಕೆರೆ ಏರಿ ದುರಸ್ತಿ ಪಡಿಸಲು ಕೆರೆಯ ಬಳಿಗೆ ಯಾವುದೇ ವಾಹನಗಳು ತೆರಳಲು ಸಾಧ್ಯವಾಗುತ್ತಿಲ್ಲ. ಶೀಘ್ರ ದುಸ್ತಿಗೆ ಕ್ರಮವಹಿಸಲಾಗುವುದು. ಬೆಳೆ ಹಾನಿಗೆ ಪರಿಹಾರ ನೀಡಲು ವ್ಯವಸ್ಥೆ ಮಾಡುವುದಾಗಿ ಹೇಳಿದರು.