ಶಸ್ತ್ರಚಿಕಿತ್ಸೆ ವೇಳೆ ಯುವಕನ ಹೊಟ್ಟೆಯಲ್ಲಿದ್ದ ವಸ್ತು ನೋಡಿ ವೈದ್ಯರೆ ಶಾಕ್​​​; ಚಾಕು-ನೇಲ್ ಕಟರ್ ಏನೆಲ್ಲಾ ಸಿಕ್ತು ಗೊತ್ತಾ?

Untitled-design-2024-08-26T163729.489
Published on

ಪಾಟ್ನಾ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಯುವಕನೊಬ್ಬನ ಹೊಟ್ಟೆಯಿಂದ ವೈದ್ಯರು ಕೀ ರಿಂಗ್, ಚಾಕು, ನೇಲ್ ಕಟರ್ ಸೇರಿದಂತೆ ಹಲವು ಲೋಹದ ವಸ್ತುಗಳನ್ನು ಹೊರತೆಗೆದಿದ್ದಾರೆ.

22 ವರ್ಷದ ಯುವಕನಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಬಳಿಕ ಕುಟುಂಬಸ್ಥರು ಆತನನ್ನ ಜಿಲ್ಲಾ ಕೇಂದ್ರವಾದ ಮೋತಿಹಾರಿಯಲ್ಲಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹುಡುಗನಿಗೆ ಎಕ್ಸ್​-ರೇ ಮಾಡಲಾಗಿದೆ. ಎಕ್ಸ್​​-ರೇ ರಿಪೋರ್ಟ್​​ ನೋಡಿದ ವೈದ್ಯರು ಅಚ್ಚರಿಗೊಂಡಿದ್ದಾರೆ. ಎಕ್ಸ್​-ರೇ ವರದಿಯಲ್ಲಿ ಲೋಹದ ವಸ್ತುಗಳಿರುವುದು ಬೆಳಕಿಗೆ ಬಂತು, ಶಸ್ತ್ರಚಿಕಿತ್ಸೆ ಮಾಡುವಾಗ ಆರಂಭದಲ್ಲಿ ಕೀಉಂಗುರ ತೆಗೆಯಲಾಯಿತು. ಬಳಿಕ ಎರಡು ಕೀಗಳು, ನಾಲ್ಕು ಇಂಚು ಉದ್ದದ ಚಾಕು, ಎರಡು ನೇಲ್ ಕಟರ್‌ಗಳನ್ನು ಹೊರತೆಗೆದಿದ್ದೇವೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡದ ನೇತೃತ್ವ ವಹಿಸಿದ್ದ ಡಾ.ಅಮಿತ್ ಕುಮಾರ್ ತಿಳಿಸಿದ್ದಾರೆ.

ಗೃಹೋಪಯೋಗಿ ವಸ್ತುಗಳು ಕಾಣೆಯಾಗಿರುವ ಬಗ್ಗೆ ಅನುಮಾನದಿಂದ ಯುವಕನನ್ನು ಕೇಳಿದಾಗ ಆತ ಮೊದಮೊದಲಿಗೆ ಉತ್ತರಿಸಲು ನಿರಾಕರಿಸುತ್ತಿದ್ದ. ನಂತರ ಅದನ್ನೆಲ್ಲಾ ತಾನೇ ನುಂಗಿಬಿಟ್ಟೆ ಎಂದು ತಿಳಿಸಿದ್ದಾಗಿ ಕುಟುಂಬಸ್ಥರು ಹೇಳಿದರು.

ಶಸ್ತಚಿಕಿತ್ಸೆ ಯಶಸ್ವಿಯಾಗಿದ್ದು, ಯುವಕನಿಗೆ ಕೆಲವು ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದ ಅದಕ್ಕೆ ಔಷಧಗಳನ್ನು ನೀಡಲಾಗಿದೆ. ಆತ ಚೇತರಿಸಿಕೊಳ್ಳುತ್ತಿದ್ದು ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಶ್ಚಾರ್ಜ್​​ ಮಾಡಲಾಗುತ್ತದೆ ಎಂದು ಅವರು ಹೇಳಿದರು. ಕಳೆದ ವಾರ ಇರಾನ್‌ನಲ್ಲಿ ಇದೇ ರೀತಿಯ ಪ್ರಕರಣ ವರದಿಯಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಅಲ್ಲಿ ಸುಮಾರು 3 ಕೆಜಿ ತೂಕದ 450ಕ್ಕೂ ಹೆಚ್ಚು ಸಣ್ಣ ಲೋಹದ ವಸ್ತುಗಳನ್ನು 37 ವರ್ಷದ ವ್ಯಕ್ತಿಯ ಹೊಟ್ಟೆಯಿಂದ ಹೊರತೆಗೆಯಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net