ಯುವಕನ ಹೊಟ್ಟೆಯೊಳಗೆ ಸೇರಿಕೊಂಡ ಬಾಟಲ್; ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು

kkkkkkkkkkk
Published on

ಕೋಲ್ಕತಾ: ಅಚ್ಚರಿಯಾದ್ರೂ ಈ ಘಟನೆ ಸತ್ಯ. ಹೌದು, ಒಂದು ಕ್ಷಣ ಬೆರಗಾಗುವಂತಹ ಘಟನೆ ಕಲ್ಕತ್ತಾದಲ್ಲಿ ನಡೆದಿದೆ. ಯುವಕನ ಹೊಟ್ಟೆಯೊಳಗಿದ್ದ ಡಿಯೋಡರೆಂಟ್ ಬಾಟಲ್​ನ್ನು ಶಸ್ತ್ರಚಿಕಿತ್ಸೆಯ ಮೂಲಕ ಬರ್ದ್ವಾನ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ವೈದ್ಯರು ಹೊರತೆಗೆದಿದ್ದಾರೆ.

27 ವರ್ಷದ ಯುವಕ ಬರ್ದ್ವಾನ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಬಂದಿದ್ದಾನೆ. ಈ ವೇಳೆ ವಿಪರೀತ ಹೊಟ್ಟೆ ನೋವಿದೆ ಎಂದು ತೀವ್ರನಿಗಾ ಘಟಕಕ್ಕೆ ಸೇರಿದ್ದ. ಈ ವೇಳೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದ್ದಾರೆ. ಎಕ್ಸ್​​ರೇ ವರದಿ ತರಿಸಿ ನೋಡಿದಾಗ ಹೊಟ್ಟೆಯೊಳಗೆ ಬಾಟಲ್ ಇರುವುದು ಪತ್ತೆಯಾಗಿದೆ.

20 ದಿನಗಳ ಹಿಂದೆ ಯುವಕನ ಹೊಟ್ಟೆಯೊಳಗೆ ಬಾಟಲ್ ಸೇರಿಕೊಂಡಿದೆ. ಇದರಿಂದಾಗಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೊಟ್ಟೆಯೊಳಗಿದ್ದ ಬಾಟಲ್ ಏಳೂವರೆ ಇಂಚು ಉದ್ದ ಇತ್ತು. ಸುಮಾರು ಎರಡೂವರೆ ಗಂಟೆ ಶಸ್ತ್ರ ಚಿಕಿತ್ಸೆ ನಡೆಸಿ ಬಾಟಲನ್ನು ಹೊರತೆಗೆಯಲಾಗಿದೆ. ಯುವಕನ ಅನ್ನನಾಳಕ್ಕೆ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲಾಗಿದೆ. ಭವಿಷ್ಯದಲ್ಲಿ ಸಮಸ್ಯೆ ಬಂದು ಮತ್ತೆ ಶಸ್ತ್ರ ಚಿಕಿತ್ಸೆ ನಡೆಸಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಹೊಟ್ಟೆಯೊಳಗೆ ಬಾಟಲ್ ಹೇಗೆ ಹೋಯಿತು ಎಂಬುವುದರ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಗುದದ್ವಾರದ ಮೂಲಕ ಬಾಟಲ್ ಹೊಟ್ಟೆಯೊಳಗೆ ಹೋಯಿತು ಎಂದು ಯುವಕ ಹೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net