VIDEO: ಹುತಾತ್ಮ ಯೋಧನ ತಾಯಿಗೆ ಚಿಕಿತ್ಸೆ ನೀಡಿದ ಈ ವೈದ್ಯ ಬಳಿಕ ಮಾಡಿದ್ದೇನು ನೋಡಿ...!

Altap
Published on

ತಾನು ಚಿಕಿತ್ಸೆ ನೀಡಿದ ವೃದ್ಧೆ ಹುತಾತ್ಮ ಯೋಧನೋರ್ವನ ತಾಯಿ ಎಂಬುದು ಗೊತ್ತಾಗುತ್ತಿದ್ದಂತೆ ಈ ವೈದ್ಯ ಏನು ಮಾಡಿದ ನೋಡಿ...

ಔರಂಗಾಬಾದ್​ನ ವೈದ್ಯ ಅಲ್ತಾಫ್​ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ತುಂಬ ವೈರಲ್ ಆಗುತ್ತಿದೆ. ನೆಟ್ಟಿಗರಂತೂ ಅವರ ನಡೆಯನ್ನು ನೋಡಿ ತುಂಬ ಹೊಗಳಿದ್ದಾರೆ. ಕಾಂಗ್ರೆಸ್​ ಸಚಿವ ಅಶೋಕ್​ ಚವಾಣ್​ ಕೂಡ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಕಾಣುತ್ತಿರುವ ವೃದ್ಧಗೆ ಡಾ. ಅಲ್ತಾಫ್​ ಅವರೇ ಚಿಕಿತ್ಸೆ ನೀಡಿದ್ದರು. ಆದರೆ ಅವರು ಹೊರಡುವಾಗ ಶುಲ್ಕವನ್ನು ತೆಗೆದುಕೊಳ್ಳಲಿಲ್ಲ. ಬದಲಿಗೆ ಆಕೆಯನ್ನು ಅಪ್ಪಿಕೊಂಡರು. ಅಳುತ್ತಿದ್ದ ವೃದ್ಧೆಯನ್ನು ಪ್ರೀತಿಯಿಂದ ಸಮಾಧಾನ ಮಾಡಿದರು. ಇದನ್ನೂ ಓದಿ: VIDEO: ಪ್ರಶಸ್ತಿ ಪ್ರದಾನ ವೇಳೆ ಕ್ರಿಡಾಪಟುವಿನ ಬಳೆ ನೋಡಿ ಚಿನ್ನದ್ದಾ ಎಂದು ಕೇಳಿದ ಸಿಎಂ ಯಡಿಯೂರಪ್ಪ…

ಅಲ್ತಾಫ್​ ಅವರ ನಡೆ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋ ಪೋಸ್ಟ್ ಮಾಡಿದ ಅಶೋಕ್​ ಚವಾಣ್​, ಈ ವೈದ್ಯರ ವಿಧೇಯತೆಯನ್ನು ನೋಡಿ. ನಮ್ಮ ದೇಶಕ್ಕಾಗಿ ಅನುದಿನವೂ ಸೇವೆ ಸಲ್ಲಿಸುತ್ತಿರುವವ ಯೋಧರ ಬಗ್ಗೆ ಈ ವೈದ್ಯರಿಗೆ ಇರುವ ಸೇವಾಭಾವ ಮತ್ತು ಸೂಕ್ಷ್ಮತೆಯನ್ನು ನೋಡಿ..ನಾನು ಅವರಿಗೆ ವೈಯಕ್ತಿಕವಾಗಿ ಕರೆ ಮಾಡಿ ಧನ್ಯವಾದ ಹೇಳಿದ್ದೇನೆ ಎಂದಿದ್ದಾರೆ.

ನೆಟ್ಟಿಗರಂತೂ ವೈದ್ಯರನ್ನು ತುಂಬ ಹೊಗಳಿದ್ದಾರೆ. ಮಾನವೀಯತೆ ಎಂಬುದು ಜಾತಿ-ಧರ್ಮ ಮೀರಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net