ಪತ್ನಿ ಗಂಟಲು ಸೀಳಿ, ಕಾರು ಹರಿಸಿ ಕೊಲೆಗೈದ ಡಾಕ್ಟರ್​ ಪತಿ: ಎಸ್ಕೇಪ್​ ಆಗುವಾಗ ಪಲ್ಟಿ ಹೊಡೆದ ಕಾರು!

TN Doctor
Published on

ಚೆನ್ನೈ: ತಮಿಳುನಾಡು ಮೂಲದ ವೈದ್ಯನೊಬ್ಬ ಪತ್ನಿಯ ಗಂಟಲು ಸೀಳಿ, ಆಕೆಯ ಮೇಲೆ ತನ್ನ ಕಾರು ಹರಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಕಾಂಚಿಪುರಂ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

ಕೊಲೆಯಾದ ಮಹಿಳೆಯನ್ನು ಕೀರ್ತನಾ (28) ಎಂದು ಗುರುತಿಸಲಾಗಿದೆ. ಆರೋಪಿ ವೈದ್ಯ ಡಾ. ಗೋಕುಲ್​ ಕುಮಾರ್​ ಪತ್ನಿಯನ್ನು ಕೊಲೆ ಮಾಡಿದ್ದಲ್ಲದೆ, ಮಾವನ ಮೇಲೆಯೂ ಹಲ್ಲೆ ಮಾಡಿ ಎಸ್ಕೇಪ್​ ಆಗುವಾಗ ಆರೋಪಿಯ ಕಾರು ಅಪಘಾತಕ್ಕೀಡಾಗಿದೆ.

ಮೃತ ಕೀರ್ತನಾ ಕಾಂಚಿಪುರಂನ ಖಾಸಗಿ ಆಸ್ಪತ್ರೆಯಲ್ಲಿ ಎಚ್​ಆರ್​ ಆಗಿದ್ದರು. ಆರೋಪಿ ಗೋಕುಲ್​ ಪೊಥೇರಿ ಬಳಿ ಆಸ್ಪತ್ರೆಯ ವೈದ್ಯ. ಲಾಕ್​ಡೌನ್​ ಬಳಿಕ ಗೋಕುಲ್​ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದ. ಕೀರ್ತನಾರ ಹಿರಿಯಕ್ಕ ಗೋಕುಲ ಅವರ ಹಿರಿಯ ಸಹೋದರನನ್ನು ವರಿಸಿದ್ದಾರೆ. ಮದುವೆ ವೇಳೆ ಕೀರ್ತನಾ ಮತ್ತು ಗೋಕುಲ್​ ಪ್ರೀತಿಯಲ್ಲಿ ಬಿದ್ದು, ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು.

ಮದುವೆಯ ಬಳಿಕ ಕೀರ್ತನಾ ಪಾಲಕರೊಂದಿಗೆ ಗೋಕುಲ್​ ಮಾತುರಾಂಟಕಂ ಬಳಿಯ ಆನಂದ ನಗರಕ್ಕೆ ತೆರಳಿ ನೆಲೆಸಿದ್ದರು. ಸ್ಥಳೀಯರ ಪ್ರಕಾರ ಆಗಾಗ ದಂಪತಿ ನಡುವೆ ಜಗಳವಾಗುತ್ತಿತ್ತಂತೆ. ಅದರಲ್ಲೂ ಲಾಕ್​ಡೌನ್​ನಲ್ಲಿ ಗೋಕುಲ್​ ಕೆಲಸ ಬಿಟ್ಟ ಬಳಿಕ ನಿತ್ಯವು ಜಗಳ ನಡೆಯುತ್ತಿತ್ತಂತೆ. ಅಲ್ಲದೆ, 6 ತಿಂಗಳ ಹಿಂದೆ ಇಬ್ಬರು ಡಿವೋರ್ಸ್​ಗಾಗಿ ಅರ್ಜಿ ಸಹ ಸಲ್ಲಿಸಿದ್ದರು. ಆದರೂ ಇಬ್ಬರು ಒಂದೇ ಮನೆಯಲ್ಲಿ ಉಳಿದುಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಹೀರುವಾಗ ಶುಕ್ರವಾರ ಸಂಜೆ 4.30ರ ಸುಮಾರಿಗೆ ದಂಪತಿ ನಡುವೆ ಕಲಹ ಶುರುವಾಗಿದೆ. ಈ ವೇಳೆ ಗೋಕುಲ್​ ಚಾಕು ತೆಗೆದುಕೊಂಡು ಮೊದಲು ಕೀರ್ತನಾರ ಗಂಟಲನ್ನು ಸೀಳಿದ್ದಾನೆ. ಈ ವೇಳೆ ಕೀರ್ತನಾಳ ತಂದೆ ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಗೋಕುಲ್​ ಅವರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಬಳಿಕ ಕೀರ್ತನಾರ ಕೂದಲು ಹಿಡಿದುಕೊಂಡು ಹೊರಗೆ ಎಳೆದುತಂದು ಆಕೆಯ ಮೇಲೆ ಕಾರು ಹರಿಸಿ ಕೊಂದಿದ್ದಾನೆ. ಬಳಿಕ ಅದೇ ವಾಹನದಲ್ಲಿ ಎಸ್ಕೇಪ್​ ಆಗುವಾಗ ಸ್ಥಳೀಯರು ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ, ಕಾರು ನಿಲ್ಲಿಸದೇ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.

ಬಳಿಕ ಸ್ಥಳೀಯರು ಪೊಲೀಸ್​ ಕಂಟ್ರೋಲ್​ ರೂಮ್​ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ಕೀರ್ತನಾ ಮತ್ತು ಅವರ ತಂದೆಯನ್ನು ಸ್ಥಳೀಯರು ಕಾಂಚಿಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಕೀರ್ತನಾ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿರುವ ತಂದೆಗೆ ಚಿಕಿತ್ಸೆ ಮುಂದುವರಿದಿದೆ.

ಆರೋಪಿ ಎಸ್ಕೇಪ್​ ಆಗುವುದನ್ನು ತಡೆಯಲು ಪೊಲೀಸರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಚ್ಚರಿಕೆ ನೀಡಲು, ಪೊಲೀಸರನ್ನು ನೋಡಿದ ಆರೋಪಿ ಅರ್ಥುರ್​ ಟೋಲ್​ ಬೂತ್​ ಬಳಿ ವೇಗವಾಗಿ ಟರ್ನ್​ ಮಾಡಿದಾಗ ಕಾರು ಉರುಳಿಬಿದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಗೋಕುಲ್​ ಅನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net