More

    ಜಲಾಶಯದ ದಡದಲ್ಲಿ ವಿಚಿತ್ರ ಜೀವಿ ನೋಡಿ ಬೆಚ್ಚಿಬಿದ್ದ ಜನ: ಇದರ ಬಗ್ಗೆ ತಿಳಿದ್ರೆ ಅಚ್ಚರಿಯಾಗುತ್ತೆ!

    ಸಿಂಗಾಪೂರ್​: ನೋಡಲು ಥೇಟ್​ ಮೊಸಳೆಯಂತೆ ಕಾಣುವ ಇತಿಹಾಸಪೂರ್ವದ ದೈತ್ಯಾಕಾರದ ಮೀನು ಸಿಂಗಾಪೂರ್​ನ ಜಲಾಶಯವೊಂದರಲ್ಲಿ ಪತ್ತೆಯಾಗಿದ್ದು, ಸಾಗರ ರಹಸ್ಯದ ಕಿಡಿ ಹೊತ್ತಿಸಿದೆ.

    ಸಿಂಗಾಪೂರ್​ನ ಮ್ಯಾಕ್‌ರಿಚ್ಚಿ ಜಲಾಶಯದ ದಡದಲ್ಲಿ ವಿಚಿತ್ರ ಜೀವಿಯ ಕಳೇಬರಹ ಪತ್ತೆಯಾಗಿದ್ದು, ಅಲ್ಲಿನ ಸ್ಥಳೀಯರು ಯಾವ ಪ್ರಾಣಿ ಎಂದು ಪತ್ತೆಹಚ್ಚಲು ಪರದಾಡಿದ ಪ್ರಸಂಗ ಜರುಗಿತು. ಪ್ರಸ್ತುತ ಏಷ್ಯಾದಲ್ಲಿ ನೆಲೆಸಿರುವ ಸ್ಕಾಟಿಷ್​ ಪ್ರಜೆ ಕರೆನ್​ ಲ್ಯಾಥ್ಗೋ (31) ಇತಿಹಾಸಪೂರ್ವದಲ್ಲಿ ಇಂತಹ ಪ್ರಾಣಿಗಳು ಇದ್ದವು ಎಂದು ತಿಳಿಸಿದರು.

    ಇದನ್ನೂ ಓದಿರಿ: ಪ್ರೇಮಿಗಳ ದಿನದಂದು ಪತ್ನಿ ಜತೆ ಹೊಸ ಬೈಕಲ್ಲಿ ಜಾಲಿರೈಡ್ ಹೋದ ನಟ ವಿವೇಕ್ ಒಬೆರಾಯ್​; ಆಮೇಲಾಯಿತು ವಿವೇಕೋದಯ!

    ಮುಖ ನೋಡಲು ಮೊಸಳೆಯಂತಿದ್ದರೆ, ಮುಂಡವು ಮೀನಿನಂತಿದೆ. ಇದನ್ನು ಅಲಿಗೇಟರ್​ ಗಾರ್​ ಎಂದು ಹೇಳಲಾಗಿದ್ದು, ಹೆಚ್ಚಾಗಿ ಇಂತಹ ಮೀನುಗಳು ಸಿಂಗಾಪೂರ್​ನಿಂದ 10 ಸಾವಿರ ಮೈಲಿ ದೂರದ ದಕ್ಷಿಣ ಅಮೆರಿಕದಲ್ಲಿ ಕಂಡುಬರುತ್ತವೆ. ಆದರೆ, ಈ ಮೀನು ಇಲ್ಲಿಗೆ ಹೇಗೆ ಬಂತು ಎಂಬುದು ಇದೀಗ ಯಕ್ಷ ಪ್ರಶ್ನೆಯಾಗಿದೆ.

    ಜಲಾಶಯದ ದಡದಲ್ಲಿ ವಿಚಿತ್ರ ಜೀವಿ ನೋಡಿ ಬೆಚ್ಚಿಬಿದ್ದ ಜನ: ಇದರ ಬಗ್ಗೆ ತಿಳಿದ್ರೆ ಅಚ್ಚರಿಯಾಗುತ್ತೆ!

    ಈ ವರ್ಗದ ಪ್ರಾಣಿಗಳು ವಿಷಕಾರಿ ಮೊಟ್ಟೆಗಳನ್ನು ಉತ್ಪಾದಿಸುತ್ತವೆ. ಪರಭಕ್ಷಕ ಮತ್ತು ಆಕ್ರಮಣಕಾರಿ ಪ್ರಭೇದಗಳನ್ನು ಅನುಮತಿಯಿಲ್ಲದೆ ಕಾಡಿಗೆ ಬಿಡುಗಡೆ ಮಾಡುವುದು ಪರಿಸರ ವ್ಯವಸ್ಥೆಗಳ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ ಎಂದು ಲ್ಯಾಥ್ಗೋ ಮಾಹಿತಿ ನೀಡಿದರು.

    ಕಳೇಬರಹದ ಸ್ಥಿತಿಯನ್ನು ನೋಡಿ ಮೊಸಳೆ ಎಂದು ಭಾವಿಸಿದೆ. ಆದರೆ, ಸರಿಯಾಗಿ ನೋಡಲಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಅದು ಮೊಸಳೆಯಲ್ಲ ಎಂಬುದು ಗೊತ್ತಾಯಿತು. ಇತಿಹಾಸಪೂರ್ವದಲ್ಲಿ ಕಂಡುಬರುವ ಜೀವಿ ಎಂಬುದು ತಿಳಿಯಿತು. ಇದು ಹೇಗೆ ಜಲಾಶಕ್ಕೆ ಬಂದಿತು ಎಂಬುದು ನಿಜಕ್ಕೂ ಶಾಕ್​ ಆಯಿತು ಎಂದು ಲ್ಯಾಥ್ಗೋ ತಿಳಿಸಿದರು.

    ಇದನ್ನೂ ಓದಿರಿ: ಹಿಮಯಮನಿಗೆ ಬಲಿಯಾದ ಕುಟುಂಬಕ್ಕೆ ದಾರಿ ದೀಪವಾದ ಸೋನು ಸೂದ್​! 4 ಹೆಣ್ಣು ಮಕ್ಕಳಿಗೆ ಗಾಡ್​ ಫಾದರ್​

    ಈ ಪ್ರಭೇದವನ್ನು ‘ಜೀವಂತ ಪಳೆಯುಳಿಕೆ’ ಎಂದು ಕರೆಯಲಾಗುತ್ತದೆ. ಏಕೆಂದರೆ ಅದರ ಜೀವಶಾಸ್ತ್ರದ ಹೆಚ್ಚಿನ ಭಾಗವನ್ನು ಅದರ ಆರಂಭಿಕ ಪೂರ್ವಜರಿಂದ ಕಂಡುಹಿಡಿಯಬಹುದಾಗಿದೆ. ಇನ್ನು ಇದು ಹೇಗೆ ಸಿಂಗಾಪೂರ್​ಗೆ ಬಂತೆಂದು ಪತ್ತೆಹಚ್ಚುವ ಪ್ರಯತ್ನಕ್ಕೆ ಅಧಿಕಾರಿಗಳು ಕೈಹಾಕಿದ್ದು, ಚಿಕ್ಕದರಲ್ಲಿ ಸಾಕಲು ಮನೆಗೆ ತಂದು ನಂತರ ಜಲಾಶಕ್ಕೆ ತಂದು ಬಿಟ್ಟಿರಬಹುದು ಎಂದು ಶಂಕಿಸಲಾಗಿದೆ.

    ಜಲಾಶಯದ ದಡದಲ್ಲಿ ವಿಚಿತ್ರ ಜೀವಿ ನೋಡಿ ಬೆಚ್ಚಿಬಿದ್ದ ಜನ: ಇದರ ಬಗ್ಗೆ ತಿಳಿದ್ರೆ ಅಚ್ಚರಿಯಾಗುತ್ತೆ!

    ಇನ್ನು ಸಿಂಗಾಪುರ್ ಕಾನೂನಿನ ಪ್ರಕಾರ ಪ್ರಾಣಿಗಳನ್ನು ಜಲಾಶಯಗಳು ಮತ್ತು ಜಲಮಾರ್ಗಗಳಿಗೆ ಬಿಡುಗಡೆ ಮಾಡುವುದರಿಂದ 1600 ಪೌಂಡ್​ (6 1,600) ದಂಡ ವಿಧಿಸಲಾಗುತ್ತದೆ. ಸದ್ಯ ಅಲಿಗೇಟರ್​ ಗಾರ್​ ಮೃತದೇಹವನ್ನು ಸಿಂಗಾಪುರ ಜಲ ಸಂಸ್ಥೆ ತೆಗೆದುಹಾಕಿದೆ. (ಏಜೆನ್ಸೀಸ್​)

    ಫೇಸ್​ಬುಕ್​ನಲ್ಲಿ ಲವ್​​ ಮಾಡಿ ಯುವಕನನ್ನು ಮದ್ವೆಯಾದ ತೃತೀಯಲಿಂಗಿಯ ಬಾಳು ಇದೀಗ ಗೋಳು..!

    ಪೆಟ್ರೋಲ್ ದರ ಏರಿಕೆ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಏನ್ ಹೇಳಿದ್ದಾರೆ ಗೊತ್ತಾ?

    ಆತಂಕವಾದ, ಹಿಂಸಾಚಾರ ಹರಡುತ್ತಿರುವವರಲ್ಲಿ ಸುಶಿಕ್ಷಿತರೂ ಇದ್ದಾರೆ : ಮೋದಿ ಕಳವಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts