34 ವರ್ಷದ ಡಾಕ್ಟರ್ ಕುಸಿದು ಬಿದ್ದು ಸಾವು; ಆಸ್ಪತ್ರೆಯಲ್ಲಿ ರೋಗಿಗಳನ್ನು ಪರೀಕ್ಷಿಸಿ ಮೆಟ್ಟಿಲೇರುತ್ತಿದ್ದಂತೆ ಹೃದಯಾಘಾತ!

Dr Chandrashekhar
Published on

ಸಿಂಧನೂರು: ರಾಜ್ಯ ಮಾತ್ರವಲ್ಲದೆ ದೇಶದಲ್ಲಿ ಕುಸಿದು ಬಿದ್ದು ಇಲ್ಲವೇ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗುತ್ತಿರುವಂಥ ಪ್ರಕರಣಗಳು ಇನ್ನೂ ಮುಂದುವರಿದಿದ್ದು, ಇಂದು ವೈದ್ಯರೊಬ್ಬರು ಕೂಡ ಅದೇ ರೀತಿಯ ಸಾವಿನಿಂದಾಗಿ ಕೊನೆಯುಸಿರೆಳೆದರು.

ರಾಯಚೂರು ಜಿಲ್ಲೆಯ ಸಿಂಧನೂರು ಅಕ್ಕಮಹಾದೇವಿ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ವೈದ್ಯ ಚಂದ್ರಶೇಖರ ಮಾದಿನೂರು (34) ಸಾವಿಗೀಡಾದವರು. ಇವರು ಇಂದು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಈ ಸಾವು ಸಂಭವಿಸಿದೆ.

ಎಂದಿನಂತೆ ಆಸ್ಪತ್ರೆಗೆ ಬಂದಿದ್ದ ಡಾ. ಚಂದ್ರಶೇಖರ, ಇಂದು ಬೆಳಗ್ಗೆ ರೋಗಿಗಳನ್ನು ಪರೀಕ್ಷೆ ಮಾಡಿ, ಸಲಹೆ-ಸೂಚನೆಗಳನ್ನು ನೀಡಿ ಚಿಕಿತ್ಸೆ ಒದಗಿಸಿದ್ದರು. ಆ ಬಳಿಕ ಅವರು ಆಸ್ಪತ್ರೆಯಲ್ಲಿ ಮಹಡಿಗೆ ಹತ್ತುತ್ತಿದ್ದಂತೆ ಎದೆನೋವು ಕಾಣಿಸಿಕೊಂಡಿದೆ.

ಕೆಲವೇ ಕ್ಷಣದಲ್ಲಿ ಕುಸಿದು ಬಿದ್ದ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇವರು ತಂದೆ, ಪತ್ನಿ, ಪುತ್ರರನ್ನು ಅಗಲಿದ್ದಾರೆ. ನಗರದ ವೀರಶೈವ ರುದ್ರಭೂಮಿಯಲ್ಲಿ ಮಂಗಳವಾರ ಇವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net